ರಾಜಕೀಯ

ಜವಾಬ್ದಾರಿ ಕೊಟ್ಟರೆ ಹೊರುತ್ತೇನೆ.. ಇಲ್ಲದಿದ್ದರೆ ಜನಸೇವೆ ಮಾಡುತ್ತೇನೆ…. ಕೊಡ್ಗಿ

Views: 0

ಕುಂದಾಪುರ : ಕಳೆದ 30 ವಷ೯ಗಳಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಸಾಮಾಜಿಕ ನ್ಯಾಯ, ಜನರೊಂದಿಗೆ ಇರುವ ಒಡನಾಟವನ್ನು ಹತ್ತಿರದಿಂದ ಕಂಡವನು ನಾನು, ಆದರೆ, ಅವರು ನಮಗೆ ಯಾವುದೇ ಸುಳಿವನ್ನು ನೀಡದೇ ಚುನಾವಣಾ  ರಾಜಕೀಯ  ತೀಮಾ೯ನ  ಮಾಡಿದ್ದಾರೆ. ಆ ಸಂದಭ೯ದಲ್ಲಿ ಕುಂದಾಪುರದಲ್ಲಿ ಮುಂದಿನ ನಾಯಕರು ಯಾರು ಎಂಬ ಪ್ರಶ್ನೆ ಬಂದಾಗ ನಾನು, ಪಕ್ಷ ಜವಾಬ್ದಾರಿ ಕೊಟ್ಟರೆ ಹೊರುತ್ತೇನೆ. ಇಲ್ಲದಿದ್ದರೆ ಕಾಯ೯ಕತ೯ನಾಗಿ ಜನಸಾಮಾನ್ಯರ ಸೇವೆ ಮಾಡುತ್ತೇನೆ ಎಂದು ವರಿಷ್ಠರಿಗೆ ಹೇಳಿದ್ದೇನೆ. ನಾನು ಯಾವುದೇ ಸುಳ್ಳು ಭರವಸೆ, ಆಶ್ವಾಸನೆ ನೀಡುವುದಿಲ್ಲ.ಸದಾ ನಿಮ್ಮ ಸೇವೆ ಮಾಡುತ್ತೇನೆ ಬಹುಮತದಿಂದ ನನ್ನನ್ನು ವಿಧಾನ ಸಭೆಗೆ ಆರಿಸಿರಿ ಎಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿ೯ ಕಿರಣ ಕುಮಾರ ಕೊಡ್ಗಿ ಅವರು ಹೇಳಿದರು.

ಅವರು ಎ. 24 ರಂದು ಶಿರಿಯಾರ ಪಂಚಾಯಿತಿ ಬಳಿ ಬಿಜೆಪಿ ಕಾಯ೯ಕತ೯ರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮತಯಾಚಿಸಿದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಾತನಾಡಿ, 30 ವಷ೯ಗಳ ರಾಜಕೀಯ ಇತಿಹಾಸದಲ್ಲಿ ಜಾತಿ ಬೇದ ಮರೆತು ಸಾಮಾಜಿಕ ನ್ಯಾಯ ನೀಡಿದ ಆತ್ಮವಿಶ್ವಾಸ ನನಗಿದೆ. 5 ಭಾರಿ  ಶಾಸಕನಾಗಿ ಜನಸೇವೆಗೆ  ಅವಕಾಶ ನೀಡಿದ್ದೀರಿ, ಹೊಸಬರಿಗೆ  ಅವಕಾಶ  ನೀಡಬೇಕು ಎಂಬ ನೆಲೆಯಲ್ಲಿ ನನ್ನ ತೀಮಾ೯ನ ತಿಳಿಸಿದ್ದೇನೆ.  ಯಾವುದೇ ರಾಜಕೀಯ ಪಕ್ಷದ ಬಗ್ಗೆ ಟೀಕೆ ಮಾಡುವುದಿಲ್ಲ,ನನಗೆ ನೀಡಿದ ಮತಕ್ಕಿಂತ ಜಾಸ್ತಿಯಾಗಿ ಕಿರಣ ಕುಮಾರ ಕೊಡ್ಗಿ ಅವರಿಗೆ ಆತ್ಮಸಾಕ್ಷಿಯ ಮತಗಳನ್ನು ನೀಡಿ, ಶಾಸಕರನ್ನಾಗಿ ಮಾಡಿ ಎಂದು ಮತದಾರರಲ್ಲಿ ವಿನಂತಿಸಿದರು. ಸಭೆಯಲ್ಲಿ ಸುಪ್ರಸಾದ್ ಶೆಟ್ಟಿ, ಕುಂದಾಪುರ ಕ್ಷೇತ್ರದ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಂಡಲದ ಪ್ರಧಾನ ಕಾಯ೯ದಶಿ೯ ವಕ್ವಾಡಿ ಸತೀಶ್ ಪೂಜಾರಿ ಮಾತನಾಡಿದರು. ದಿವಾಕರ ಹೆಗ್ಡೆ, ಸುಧೀಂದ್ರ ಶೆಟ್ಟಿ, ವಿಮಲ, ವಿಖ್ಯಾತ ಶೆಟ್ಟಿ ಇದ್ದರು.

Related Articles

Back to top button
error: Content is protected !!