ಇತರೆ
ಜಮೀನಿನಲ್ಲಿ ಉಳುಮೆ ಮಾಡುವಾಗ ಟ್ಯಾಕ್ಟರ್ ಅಡಿಗೆ ಬಿದ್ದು ಬಾಲಕ ಸಾವು

Views: 56
ಚಾಮರಾಜನಗರ: ಬಾಲಕನೋರ್ವ ಚಲಿಸುತ್ತಿರುವ ಟ್ಯಾಕ್ಟರ್ ಅಡಿಗೆ ಆಕಸ್ಮಿಕವಾಗಿ ಸಿಲುಕಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದ ಗದ್ದೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದ ಕಾರ್ತಿಕ್ ಎಂಬವರ ಪುತ್ರ ಭವೀಶ್(7) ಎಂದು ಗುರುತಿಸಲಾಗಿದೆ.
ಈತ ಬೇಸಿಗೆ ರಜೆ ನಿಮಿತ್ತ ದೇವರಸನಹಳ್ಳಿಯ ಅಜ್ಜಿ ಮನೆಗೆ ಬಂದಿದ್ತದ ಅಜ್ಜಿಯ ಹೊಲದಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ನಲ್ಲಿ ಚಾಲಕನ ಜತೆಗೆ ಕುಳಿತಿದ್ದ ಬಾಲಕ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ. ಇದು ಚಾಲಕನ ಗಮನಕ್ಕೆ ಬರುವಷ್ಟರಲ್ಲಿ ಬಾಲಕ ಅಡಿಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.






