ರಾಜಕೀಯ
ಚುನಾವಣೆಯಲ್ಲಿ ಮತದಾರರ ಹೃದಯ ಗೆಲ್ಲಬೇಕು: ಹಾಲಾಡಿ

Views: 0
ಕುಂದಾಪುರ : ನಾನು ಕಳೆದ 5 ಬಾರಿ ಗೆದ್ದರೂ ನನ್ನ ಗೆಲುವಿಗೆ ಕಾಯ೯ಕತ೯ರೆ ಕಾರಣ, ನನ್ನ ಅವಧಿಯಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದೆ, ಯಾರಿಗೂ ಅನ್ಯಾಯ ಮಾಡಿದವನಲ್ಲ ಯಾವುದೇ ಪಕ್ಷದ ಬಗ್ಗೆ ಟೀಕೆ ಮಾಡಿಲ್ಲ, ನಿಜವಾದ ಹೋರಾಟಗಾರರ ಪಕ್ಷವೇ ಬಿಜೆಪಿ.
ಕಳೆದ 30 ವಷ೯ಗಳಿಂದ ಬಿಜೆಪಿಗೋಸ್ಕರ ಹಗಲಿರಳು ದುಡಿದ ನಮ್ಮ ಪಕ್ಷದ ಅಧಿಕೃತ ಅಭ್ಯಥಿ೯ ಕಿರಣ ಕುಮಾರ ಕೊಡ್ಗಿ ಅವರು ಮತದಾರರ ಹೃದಯ ಗೆದ್ದಿದ್ದಾರೆ. ಚುನಾವಣೆಯಲ್ಲಿ ಅವರನ್ನು ಬಹುಮತದಿಂದ ಆರಿಸಿ ಎಂದು ಕುಂದಾಪುರದಲ್ಲಿ ನಡೆದ ಕಾಯ೯ಕತ೯ರ ಸಭೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಾತನಾಡಿದರು.






