ಚಾಲಕನ ಜತೆ ಸ್ನೇಹ, ಗೆಳೆಯನ ಮೇಲೆ ಮೋಹ.. ಅತ್ಯಾಚಾರ ಕತೆ ಹೇಳಿದ ಯುವತಿ? ವಿಚಾರಣೆ ವೇಳೆ ಸತ್ಯ ವಿಚಾರ ಬಯಲು!
Views: 255
ಕನ್ನಡ ಕರಾವಳಿ ಸುದ್ದಿ: ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಕೇರಳ ಮೂಲದ ಯುವತಿ ನೀಡಿದ್ದ ದೂರು ಆಧರಿಸಿ ತನಿಖೆ ವೇಳೆ ಪೊಲೀಸರೇ ಶಾಕ್ ಆಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ನಿಜಕ್ಕೂ ಆಕೆಯ ಮೇಲೆ ಅತ್ಯಾಚಾರ ಆಗಿದೆಯೇ ಅಥವಾ ಪ್ರಿಯತಮನ ಬಳಿ ಬಳಿ ಸತ್ಯ ಮುಚ್ಚಿಡಲು ಆಕೆ ಸುಳ್ಳು ಹೇಳಿದಳಾ ಎನ್ನುವ ಅನುಮಾನವೀಗ ಪೊಲೀಸರ ತಲೆಕೆ ಡಿಸಿದೆ. ಮಡಿವಾಳ ಪೊಲೀಸ್ ಠಾಣೆಗೆ ಬಂದ ಯುವತಿಯೊ ಬ್ಬಳು ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಆರೋಪಿಸಿ ದ್ದರು. ತಕ್ಷಣ ಅಲರ್ಟ್ ಆದ ಪೊಲೀಸರು ಮೊದಲು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಆದರೆ ಘಟನೆ ನಡೆದ ಸ್ಥಳ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಆಗಿರುವ ಕಾರಣ ಪ್ರಕರಣ ವರ್ಗಾಯಿಸಲಾಗಿತ್ತು. ಪ್ರಕರಣ ಸಂಬಂಧ ಕ್ಯಾಬ್ ಚಾಲಕ ಸುರೇಶ್ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾ ರಣೆ ನಡೆಸಿದ್ದು,ಈ ವೇಳೆ ಆತ ಬೇರೆಯದ್ದೇ ಕತೆ ಹೇಳಿದ್ದಾನೆ. ಕ್ಯಾಬ್ ಚಾಲಕ ಸಹ ಕೇರಳ ಮೂಲದವನಾಗಿದ್ದು, ಇಬ್ಬರಿಗೂ ಪರಿಯವಿದ್ದ ಕಾರಣ ಇತ್ತೀಚೆಗೆ ಒಟ್ಟಾಗಿ ಪಾರ್ಟಿ ಕೂಡ ಮಾಡಿದ್ದರು. ಈ ವೇಳೆ ಯುವತಿಯ ಕುತ್ತಿಗೆ ಭಾಗಕ್ಕೆ ಸಣ್ಣ ಗಾಯವಾಗಿತ್ತು. ಆ ಬಳಿಕ ಯುವತಿ ಕೇರಳಕ್ಕೆ ತೆರಳಿದ್ದು, ಅಲ್ಲಿ ಆಕೆಯ ಪ್ರಿಯತಮ ಗಾಯದ ಬಗ್ಗೆ ಕೇಳಿದ್ದಾನೆ. ಈ ವೇಳೆ ತನ್ನ ಮೇಲೆ ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಳು. ಗೆಳತಿ ಹೇಳಿದ್ದು ಸತ್ಯ ಎಂದು ತಿಳಿದ ಆಕೆಯ ಪ್ರಿಯತಮ ಸೀದಾ ಮಡಿವಾಳ ಪೊಲೀಸ್ ಠಾಣೆಗೆ ಆಕೆಯನ್ನು ಕರೆತಂದು ಪ್ರಕರಣ ದಾಖಲಿಸಿದ್ದ. ಆದರೆ ವಿಚಾರಣೆ ವೇಳೆ ಬೇರೆಯದ್ದೇ ಸತ್ಯ ಹೊರಬರುತ್ತಿದೆ. ಆರೋಪಿ ನನಗೆ ಬಲವಂತ ಮಾಡಿದ್ದಾಗಿ ಯುವತಿ ಹೇಳಿರುವ ಹಿನ್ನಲೆ ಪೊಲೀಸರು ಸದ್ಯ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಪ್ರಕರಣದ ಅಸಲಿ ವಿಚಾರ ಹೊರಬರಬೇಕಿದೆ.
ಅತ್ಯಾಚಾರ ಮಾಡಿಲ್ಲ: ಚಾಲಕ ತಾನು ಮತ್ತು ದೂರು ನೀಡಿರುವ ಯುವತಿ ಇಬ್ಬರೂ ಪರಿಚಯಸ್ಥರು. ನಾನು ಆಕೆಯ ಮೇಲೆ ಅತ್ಯಾಚಾರ ಮಾಡಿಲ್ಲ. ಈ ಹಿಂದೆ ಕ್ಯಾಬ್ ಬುಕ್ ಮಾಡಿದಾಗ ಇಬ್ಬರಿಗೂ ಪರಿಚಯವಾಗಿತ್ತು. ಆ ಪರಿಚಯ ಸ್ನೇಹಕ್ಕೆ ತಿರುಗಿತ್ತು ಎಂದು ತಿಳಿಸಿದ್ದಲ್ಲದೆ, ಇಬ್ಬರ ನಡುವಿನ ವಾಟ್ ಆ್ಯಪ್ ಚಾಟ್ನ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ. ಜತೆಗೆ ನಾವಿಬ್ಬರು ಒಪ್ಪಿಯೇ ದೈಹಿಕ ಸಂಪರ್ಕ ನಡೆಸಿದ್ದೇವೆ. ಈ ವೇಳೆ ನನ್ನ ಜತೆ ಬೇರೆ ಯಾರೂ ಇರಲಿಲ್ಲ ಎಂದು ತಿಳಿಸಿದ್ದಾನೆ. ಹೀಗಾಗಿ ಯುವತಿಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆಕೆ ಸಾಕಷ್ಟು ಗೊಂದಲದ ಹೇಳಿಕೆಗಳನ್ನು ನೀಡಿದ್ದಾಳೆ ಎನ್ನಲಾಗಿದೆ.






