ಜನಮನ

ಚಲಿಸುತ್ತಿರುವ ರೈಲಿನಲ್ಲಿ ದರೋಡೆ; ವಿರೋಧಿಸಿದ ಬಾಲಕಿಯನ್ನು ಹೊರ ದೂಡಿದ  ದರೋಡೆಕಾರರಿಂದ ಬಾಲಕಿ ಸಾವು 

Views: 139

ಕನ್ನಡ ಕರಾವಳಿ ಸುದ್ದಿ: ಚಲಿಸುವ ರೈಲಿನಲ್ಲಿ ಗ್ಯಾಂಗ್ ವೊಂದು ದರೋಡೆ ಮಾಡಿದೆ. ಈ ವೇಳೆ ಹುಡುಗಿ ಬಳಿಯಿದ್ದ ವಸ್ತುಗಳನ್ನೂ ದರೋಡೆ ಮಾಡಿದೆ. ಪ್ರತಿಭಟಿಸಿದ ಬಾಲಕಿಯನ್ನು ಚಲಿಸುವ ರೈಲಿನಿಂದ ಹೊರಗೆ ಎಸೆಯಲಾಗಿದೆ. ದರೋಡೆಕೋರರಿಂದ ಹೊರಕ್ಕೆ ದೂಡಲ್ಪಟ್ಟ ಹುಡುಗಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾಳೆ.

ಮಂಗಳವಾರ ಬೆಳಗ್ಗೆ ದುಷ್ಕರ್ಮಿಗಳು ಅಪ್ ಕಾಮಾಖ್ಯ ಧಾಮ್ ಎಕ್ಸ್‌ಪ್ರೆಸ್ ರೈಲನ್ನು (15620) ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನಾ ನಿರತ ಬಾಲಕಿಯನ್ನು ಚಲಿಸುವ ರೈಲಿನಿಂದ ಹೊರಗೆ ಎಸೆದಿದ್ದಾರೆ. ಸಬೋರ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ಮೃತಳನ್ನು ಖಗಾರಿಯಾ ನಿವಾಸಿ ಸುನಿಲ್ ಕುಮಾರ್ ಅವರ ಪುತ್ರಿ ಕಾಜಲ್ ಕುಮಾರಿ ಎಂದು ಗುರುತಿಸಲಾಗಿದೆ. ಕಾಜಲ್ ತನ್ನ ಕುಟುಂಬದೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ಈ ಮಧ್ಯೆ, ದುಷ್ಕರ್ಮಿಗಳು ಸಬೋರ್ ರೈಲು ನಿಲ್ದಾಣದ ಬಳಿ ಈ ಕೃತ್ಯ ಎಸಗಿದ್ದಾರೆ.

ಘಟನೆಯ ಹಿನ್ನೆಲೆ: ರೈಲು ಸಬೋರ್ ನಿಲ್ದಾಣವನ್ನು ತಲುಪಿದ ತಕ್ಷಣ, ಇಬ್ಬರು ದುಷ್ಕರ್ಮಿಗಳು ಕಾಜಲ್ ಅವರ ಬ್ಯಾಗ್‌ನಿಂದ ಮೊಬೈಲ್ ಮತ್ತು ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಕಾಜಲ್ ಪ್ರತಿಭಟಿಸಿದಾಗ, ದುಷ್ಕರ್ಮಿಗಳು ಆಕೆಯನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಿದ್ದಾರೆ. ದೂಡಿದ ರಭಸಕ್ಕೆ ಕಾಜಲ್ ಇನ್ನೊಂದು ಹಳಿ ಮೇಲೆ ಬಿದ್ದಿದ್ದಾಳೆ.

ಗಾಯಗೊಂಡು ನರಳುತ್ತಿದ್ದ ಬಾಲಕಿ ಸಹಾಯಕ್ಕೆ ಬರಲೇ ಇಲ್ಲ ಕಾಜಲ್ಳನ್ನು ದುಷ್ಕರ್ಮಿಗಳು ಹೊರಗೆ ನೂಕಿದ್ದರಿಂದ ಸಂಬಂಧಿಕರು ಸರಪಳಿ ಎಳೆದು ರೈಲನ್ನು ನಿಲ್ಲಿಸಿದರು. ಇದಾದ ನಂತರ ಕಾಜಲ್ ಸುಮಾರು 15 ನಿಮಿಷಗಳ ಕಾಲ ಸಬೋರ್ ನಿಲ್ದಾಣದ ಬಳಿ ಗಾಯಗೊಂಡ ಸ್ಥಿತಿಯಲ್ಲಿ ನೋವಿನಿಂದ ಬಳಲುತ್ತಿದ್ದಳು.ಯಾರ ನೆರವು ಸಿಗದಿದ್ದರಿಂದ ದಾರಿ ಕಾಣದಾದದ ಕುಟುಂಬಸ್ಥರು ಗಾಯಗೊಂಡ ಕಾಜಲ್ ಳನ್ನು ಹೇಗೋ ಆಟೋದಲ್ಲಿ ಮಾಯಗಂಜ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಕಾಜಲ್ ಸಾವನ್ನಪ್ಪಿದ್ದಾರೆ.

 

Related Articles

Back to top button