ಇತರೆ
ಕುಂದಾಪುರ: ವಕ್ವಾಡಿಯಲ್ಲಿ ರಸ್ತೆ ದಾಟುದಿದ್ದ ಸೈಕಲ್ ಸವಾರರಿಗೆ ಕಾರು ಡಿಕ್ಕಿ

Views: 242
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿ ವೇಗವಾಗಿ ಬರುತ್ತಿದ್ದ ಮಾರುತಿ ಒಮಿನಿ ಕಾರಿಗೆ ಸೈಕಲ್ ಸವಾರರಿಗೆ ಕಾರಿಗೆ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಸ್ತೆಯ ಹತ್ತಿರದ ರಸ್ತೆಯಲ್ಲಿ ನಾಗೇಶ್ ಶೇಟ್ ಎಂಬುವವರು ವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದ ಕಾರಿಗೆ ಸೈಕಲ್ ಸವಾರ ಗಣಪತಿ ಹೆಗ್ಡೆ ( 58) ಅವರು ಎ.23 ಬುಧವಾರ ಸಂಜೆ ಕೂಲಿ ಕೆಲಸ ಮಾಡಿಕೊಂಡು ಮನೆಗೆ ಬರುತ್ತಿರುವಾಗ ಕಾರು ಡಿಕ್ಕಿಯಾಗಿ ಕಾರಿನ ಮೇಲೆ ಬಿದ್ದಿದ್ದಾರೆ. ಘಟನೆಯಿಂದ ಸವಾರ ಪ್ರಾಣಾಯಾಮದಿಂದ ಪಾರಾಗಿದ್ದು, ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.