ಇತರೆ

ಕುಂದಾಪುರ: ಜಪ್ತಿಯಲ್ಲಿ ಅಕ್ರಮ ಮರಳುಗಾರಿಕೆ, ಟಿಪ್ಪರ್ ವಶಕ್ಕೆ 

Views: 98

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಜಪ್ತಿ ಗಾಲವೇಶ್ವರ ದೇವಸ್ಥಾನದ ರಸ್ತೆಯಲ್ಲಿ ಅಕ್ರಮ ಮರಳುಗಾರಿಗೆ ನಡೆಸುತ್ತಿದ್ದ ಟಿಪ್ಪರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣೆ ಎಸ್‌ಐ ಭೀಮಾಶಂಕರ ಸಿನ್ನೂರ, ಟಿಪ್ಪರ್‌ ವಾಹನ ನಿಲ್ಲಿಸಲು ಸೂಚಿಸಿದಾಗ ಟಿಪ್ಪರ್‌ ಚಾಲಕ ನಿಲ್ಲಿಸದೇ ಇಂಬಾಳಿ ಕ್ರಾಸ್‌ಗೆ ತೆಗೆದುಕೊಂಡು ಹೋಗಿದ್ದ. ಅಡ್ಡಗಟ್ಟಿ ನಿಲ್ಲಿಸಿದಾಗ ಚಾಲಕ ಟಿಪ್ಪರ್‌ ಬಿಟ್ಟು ಪರಾರಿಯಾಗಿದ್ದಾನೆ.

ವಶಪಡಿಸಿಕೊಂಡಿದ್ದ ಟಿಪ್ಪರ್‌ನಲ್ಲಿ 9 ಸಾವಿರ ರೂ. ಮೌಲ್ಯದ 3 ಯುನಿಟ್‌ ಮರಳು ಪಟ್ಟೆಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Related Articles

Back to top button