ಆರ್ಥಿಕ

ಚಲಾವಣೆ ನಿಲ್ಲಿಸಿದ ರೂ.2000 ನೋಟುಗಳು

Views: 0

ಬೆಂಗಳೂರು : ರೂ.2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಜನರು ಈ ನೋಟುಗಳನ್ನು ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಬಹುದಾಗಿದೆ.

ರೂ.2000 ಮುಖಬೆಲೆಯ ನೋಟುಗಳನ್ನು ನವೆಂಬರ್ 2016 ರಲ್ಲಿ ಚಲಾವಣೆಗೆ ತರಲಾಯಿತು. ಈ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಯಲ್ಲಿ ಇದ್ದುದರಿಂದ 2018-19 ರಲ್ಲಿ ಈ ನೋಟುಗಳ ಮುದ್ರಣ ನಿಲ್ಲಿಸಲಾಯಿತು. ಈ ನೋಟುಗಳ ಜೀವಿತಾವಧಿ ಸಾಮಾನ್ಯವಾಗಿ 4-5 ವರ್ಷಗಳು. ಈಗ ಈ ಎಲ್ಲಾ ನೋಟುಗಳು ಸಾಕಷ್ಟು ಹಳೆಯದಾಗಿರುವುದರಿಂದ ರೂ.2000 ಮುಖಬೆಲೆಯ ಎಲ್ಲಾ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುತ್ತಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಮುಂದೆ ಬ್ಯಾಂಕುಗಳು ರೂ.2000 ಬೆಲೆಯ ನೋಟುಗಳನ್ನು ಸಾರ್ವಜನಿಕರಿಗೆ ನೀಡುವುದಿಲ್ಲ. ತಮ್ಮ ಬಳಿ ಇರುವ ರೂ.2000 ಬೆಲೆಯ ನೋಟುಗಳನ್ನು ಜನರು 30.09.2023 ರ ವರೆಗೆ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು 23.05.2023 ರಿಂದ ಒಂದು ಸಲಕ್ಕೆ ರೂ.20,000 ಮೌಲ್ಯದ ನೋಟುಗಳನ್ನು ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಬಹುದು. ಸಾಮಾನ್ಯ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದಾದಲ್ಲಿ ಈ ರೀತಿಯ ಯಾವುದೇ ಮಿತಿ ವಿಧಿಸಲಾಗುವುದಿಲ್ಲ. ದಿನಾಂಕ 30.09.2023ರ ಒಳಗಾಗಿ ಸಾರ್ವಜನಿಕರು ತಮ್ಮ ಬಳಿ ಇರುವ ರೂ.2000 ಬೆಲೆಯ ನೋಟುಗಳನ್ನು  ಬದಲಾಯಿಸಿಕೊಳ್ಳಬಹುದು.

– ನಾರಾಯಣ ಶೆಟ್ಟಿಗಾರ್, ಬೆಂಗಳೂರು

ಮೊ. 9845660131

 

Related Articles

Back to top button
error: Content is protected !!