ಜನಮನ
ಗ್ರಾಹಕ ಸಂಪಕ೯ ಸಭೆ

Views: 10
ಕೆ. ಜಯರಾಜ್. ಬಿ. ರೈ ಅಭಿನಂದನೆ
ಉಡುಪಿ: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಶಿವ೯ ಶಾಖೆಯ ಉದ್ಘಾಟನೆ ಹಾಗೂ ಗ್ರಾಹಕ ಸಭೆಯು ಇತ್ತೀಚೆಗೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಕೆ. ಜೈರಾಜ್. ಬಿ. ರೈ ಅವರು ಮಾತನಾಡಿ, ಈ ಶಾಖೆಯು 2021 ರಲ್ಲಿ ಆರಂಭ ಗೊಂಡು, ಡಿ. 2022 ರೊಳಗೆ ಲಾಭಾಂಶ ಗಳಿಸಿರುದಕ್ಕೆ ಅಭಿನಂದಿಸಿದರು.
ಪ್ರಸ್ತುತ 800 ಕೋಟಿ ರೂಪಾಯಿ ಮೀರಿದ ವ್ಯವಹಾರವನ್ನು ದಾಖಲಿಸಿದ್ದು. ಮಿಷನ್ 2025 ಗುರಿ 1000 ಕೋಟಿ ರೂ. ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ಸಂಘವು ಠೇವಣಾತಿ ಮತ್ತು ಸಾಲದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಮತ್ತು ನಿವ್ವಳ ಅನುತ್ಪಾದಕ ಆಸ್ತಿಯನ್ನು ಹಿಡಿತದಲ್ಲಿರಿಸಿಕೊಂಡಿದೆ.
ಸಂಘದ ಸ್ವಂತ ನಿವೇಶನದಲ್ಲಿ ಕಟ್ಟಡ ನಿವ೯ಹಣಾ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದು, ಡಿ. 2024 ರೊಳಗೆ ನಿಮಾ೯ಣ ಕಾರ್ಯವು ಪೂಣ೯ಗೊಳ್ಳಲಿದೆ. ಎಂದರು.
ಪ್ರೊ. ವೈ. ಭಾಸ್ಕರ್ ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ಶಾಖೆಯ ಗ್ರಾಹಕ ಸಂಪಕ೯ ಸಭೆಗೆ ಉತ್ತಮ ಉತ್ತಮ ಸ್ಪಂಧನೆ ದೊರಕಿರುವುದಕ್ಕೆ ಅಭಿನಂದಾಹ೯ ಮತ್ತು ಇನ್ನೂ ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಶಾಖೆಯ ವ್ಯವಸ್ಥಾಪಕ ಧನಂಜಯ ಶೆಟ್ಟಿಗಾರ ಅವರು ಶಾಖಾ ವರದಿ ಮಂಡಿಸಿದರು.
ಸಿಬ್ಬಂದಿ ಭರತ್ ಸೇವಾ ಸೌಲಭ್ಯ ಕುರಿತು ವಿವರ ನೀಡಿದರು.
ಮಹಾ ಪ್ರಬಂಧಕ ಗಣೇಶ್. ಜಿ. ಕೆ ಅವರು ವಂದಿಸಿದರು.
ಅಮಯ್ ಧನಂಜಯ್ ಪ್ರಾಥಿ೯ಸಿದರು. ಲಕ್ಷ್ಮೀ ದೇವಿ. ಪಿ. ಶೆಟ್ಟಿ ವಂದಿಸಿದರು.






