ಜನಮನ
ಗುರು ಗೋವಿಂದ ಪ್ರಶಸ್ತಿ ಪುರಸ್ಕೃತ ಎಚ್.ವಿ.ಬೆಳಗಲಿಗೆ ಸನ್ಮಾನ

Views: 1
ಹುಬ್ಬಳ್ಳಿ : ಇಲ್ಲಿನ ಅಕ್ಷಯ ಕಾಲನಿಯ ಐಬಿಎಂಅರ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಮತ್ತು ಹುಬ್ಬಳ್ಳಿ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ್. ಆರ್. ಶೆಟ್ಟಿ ಅವರ ದತ್ತಿ ಕಾಯ೯ಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ
ಗುರು ಗೋವಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಎಚ್. ವಿ. ಬೆಳಗಲಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ್. ಆರ್ ಶೆಟ್ಟಿ, ಕನಕದಾಸ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಳ, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ, ಶ್ರೇಯಾ ಜನಸೇವಾ ಪೌಂಡೇಶನ್ ರಾಜ್ಯಾದ್ಯಕ್ಷ ವಿ. ಜಿ. ಪಾಟೀಲ್, ಸಾಹಿತಿ ಎಚ್. ವಿ. ಪಟ್ಟಣ ಶೆಟ್ಟಿ, ಚೆನ್ನಬಸಪ್ಪ ದಾರವಾಡ ಶೆಟ್ರ ಇನ್ನಿತರರು ಇದ್ದರು.






