ಇತರೆ

ಗೀಜರ್ ನಿಂದ ಅನಿಲ ಸೋರಿಕೆ‌‌ :ಹಸಮಣೆ ಏರಬೇಕಿದ್ದ ಜೋಡಿ ಸಾವು 

Views: 132

ಕಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕ ಯುವತಿ ಸ್ನಾನದ ಮನೆಯಲ್ಲಿ ಶವವಾಗಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಾಮರಾಜನಗರದ ಚಂದ್ರಶೇಖರ್( 30) ಮತ್ತು ಗೋಕಾಕ್ ನ ಸುಧಾರಾಣಿ( 22) ಮೃತಪಟ್ಟವರು.ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಈ ಜೋಡಿ ಮದುವೆಯಾಗಲು ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಹಸಮಣೆ ಏರಬೇಕಿತ್ತು, ಇವರಿಬ್ಬರು ಕೆಲಸಕ್ಕೆ ಹೋಗದಿದ್ದಾಗ ಸ್ನೇಹಿತರು ಮೊಬೈಲಿಗೆ ಕರೆ ಮಾಡಿದ್ದಾರೆ.ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ಮನೆಯ ಮಾಲೀಕರನ್ನು  ವಿಚಾರಿಸಿದಾಗ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಂತರ ಕಾಲಿಂಗ್ ಬೆಲ್ ಒತ್ತಿದರೂ ಬಾಗಿಲು ತೆಗೆದಿಲ್ಲ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಲಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಸ್ನಾನದ ಮನೆಯಲ್ಲಿ ಇಬ್ಬರೂ ಮೃತಪಟ್ಟಿರುವುದು ಗೊತ್ತಾಗಿದೆ.

Related Articles

Back to top button
error: Content is protected !!