ಪ್ರವಾಸೋದ್ಯಮ

ಗಣೇಶ ಹಬ್ಬಕ್ಕೆ ಕೆಎಸ್‌ಆರ್ಟಿಸಿ 1,500 ಹೆಚ್ಚುವರಿ  ಬಸ್‌ಗಳ ಸೇವೆ !

Views: 55

ಬೆಂಗಳೂರು: ಗೌರಿ ಗಣೇಶ ಸಮೀಪಿಸುತ್ತಿದ್ದಂತೆ ಅನೇಕರು ಊರುಗಳಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೌರಿ ಗಣೇಶ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಬ್ಬದ ಸಂದರ್ಭದಲ್ಲಿ 1,500 ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಹೆಚ್ಚಿನ ಸೇವೆ ಒದಗಿಸಿದೆ. ಇದರಲ್ಲಿ ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಇ.ವಿ. ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ ಮತ್ತು ಪಲ್ಲಕ್ಕಿ ಸಾರಿಗೆ ಸೇವೆಗಳೂ ಇರಲಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಸೆಪ್ಟೆಂಬರ್ 5ರಿಂದ 7 ರವರೆಗೆ ಬಸ್ಸುಗಳನ್ನು ಓಡಿಸಲು ನಿರ್ಧರಿಸಿದೆ, ಕೆಎಸ್‌ಆರ್ಟಿಸಿ ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಸಹ ಬಿಡುಗಡೆ ಮಾಡಿದೆ. ಗೌರಿ ಹಬ್ಬ ಹಾಗೂ ಗಣೇಶ ಚತುರ್ಥಿ ನಿಮಿತ್ತ ಪಟ್ಟಣಕ್ಕೆ ತೆರಳುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ವಿಶೇಷ ಬಸ್‌ಗಳನ್ನು ಓಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಗಡ ಬುಕಿಂಗ್ ಸೌಲಭ್ಯ ಸಹ ಇದೆ.ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ನ್ನು ಒಟ್ಟಿಗೆ ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ವಿಶೇಷ ಬಸ್‌ಗಳು ಸಂಚರಿಸಲಿವೆ ಈ ಬಸ್‌ಗಳು ಮಂಗಳೂರು, ಧಾರವಾಡ, ಶಿವಮೊಗ್ಗ, ಬೆಳಗಾವಿ, ಮಡಿಕೇರಿ, ವಿಜಯಪುರ, ಗೋಕರ್ಣ, ಕಲಬುರಗಿ, ಧರ್ಮಸ್ಥಳ, ರಾಯಚೂರು, ಶೃಂಗೇರಿ, ಬಳ್ಳಾರಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸೇವೆ ಒದಗಿಸುತ್ತವೆ. ಹೊರನಾಡು,ಹುಬ್ಬಳ್ಳಿ, ಕುಕ್ಕೆ ಸುಬ್ರಹ್ಮಣ್ಯ, ದಾವಣಗೆರೆ, ಕೊಲ್ಲೂರು, ಕಾರವಾರ, ಹೊಸಪೇಟೆ.ಇದಲ್ಲದೆ, ಎರ್ನಾಕುಲಂ, ಚೆನ್ನೈ, ಹೈದರಾಬಾದ್, ಊಟಿ, ಪುಣೆ, ಕೊಡೈಕೆನಾಲ್, ಶಿರಡಿ, ಸೇಲಂ, ತಿರುಚಿನಾಪಳ್ಳಿ, ಪಣಜಿ, ಪುದುಕೋಟೆ, ಮಧುರೈ, ಪಾಲ್ಘಾಟ್ ಸೇರಿದಂತೆ ನೆರೆಯ ರಾಜ್ಯಗಳ ಹಲವು ಕೇಂದ್ರಗಳಿಗೆ ಬಸ್‌ಗಳು ಹೊರಡಲಿವೆ.

ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಇ.ವಿ. ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ ಮತ್ತು ಪಾಲಂಕಿ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ಗಳು ನಾಲ್ಕು ದಿನಗಳವರೆಗೆ ಓಡುತ್ತವೆ. ಸೆ.8ರಂದು ಸೇವೆ ಅವಧಿ ಮುಕ್ತಾಯವಾಗಲಿದೆ

Related Articles

Back to top button
error: Content is protected !!