ಖೋಟಾ ನೋಟುಗಳ ಹತೋಟಿ: ಪಾಲಿಮರ್ ನೋಟುಗಳ ಚುನಾವಣೆಗೆ ಆರ್‌ಬಿಐ ಅಸ್ತು!
Views: 34
ಕನ್ನಡ ಕರಾವಳಿ ಸುದ್ದಿ: ನಕಲಿ ನೋಟುಗಳ ಸಮಸ್ಯೆಯನ್ನು ಹತೋಟಿಗೆ ತರುವುದು ಮತ್ತು ನೋಟುಗಳ ಜೀವಿತಾವಧಿಯನ್ನು ಹೆಚ್ಚಿಸುವ ಉದ್ದೇಶಗಳೊಂದಿಗೆ ಶೀಘ್ರದಲ್ಲೇ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತರಲು ಆರ್‌ಬಿಐ ತನ್ನ ಪ್ರಯತ್ನಗಳನ್ನು ಚುರುಕುಗೊಳಿಸಿದೆ.
ಆರಂಭದಲ್ಲಿ, ಆರ್‌ಬಿಐ ಪೈಲಟ್ ಯೋಜನೆಯಾಗಿ 10 ಮತ್ತು 20 ಮುಖಬೆಲೆಯ ನೋಟುಗಳನ್ನು ಪರಿಚಯಿಸಲಿದ್ದು, 2027ರ ವೇಳೆಗೆ ಸಂಪೂರ್ಣವಾಗಿ ಪಾಲಿಮರ್ ನೋಟುಗಳನ್ನು ಪರಿಚಯಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಸಾಮಾನ್ಯ ಕಾಗದದ ನೋಟುಗಳಿಗೆ ಹೋಲಿಸಿದರೆ ಪಾಲಿಮರ್ ನೋಟುಗಳು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿರಲಿವೆ ಎನ್ನಲಾಗಿದೆ. ಇವು ವಾಟರ್‌ಪ್ರೊಫ್, ಹರಿದುಹೋಗುವ ಸಾಧ್ಯತೆ ಕಡಿಮೆ. ಅಂತೆಯೇ, ಈ ನೋಟುಗಳನ್ನು ಸುಧಾರಿತ ಭದ್ರತಾ ಕ್ರಮಗಳೊಂದಿಗೆ ಮಾಡಲಾಗಿರುವುದರಿಂದ, ನಕಲಿ ನೋಟುಗಳನ್ನು ಪರಿಶೀಲಿಸುವ ಹೆಚ್ಚಿನ ಮಟ್ಟದ ಸಾಧ್ಯತೆಯಿದೆ. ನೋಟುಗಳ ಮುದ್ರಣ ಮತ್ತು ವಿನಿಮಯ ವೆಚ್ಚವೂ ಕಡಿಮೆಯಾಗುವ ಭರವಸೆಯನ್ನು ನೀಡಲಾಗಿದೆ.
ಪ್ರಸ್ತುತ, ಇಂತಹ ನೋಟುಗಳು ಆಸ್ಟ್ರೇಲಿಯಾ, ಕೆನಡಾ, ಯುಕೆ ಮತ್ತು ಸಿಂಗಾಪುರದಂತಹ ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಪಾಲಿಮರ್ ನೋಟುಗಳ ಪ್ರಯೋಗಗಳನ್ನು ಭಾರತದಲ್ಲಿ ಈ ಹಿಂದೆ ಸೀಮಿತ ಪ್ರಮಾಣದಲ್ಲಿ ನಡೆಸಲಾಗಿದ್ದರೂ, ಇದುವರೆಗೆ ರಾಷ್ಟ್ರವ್ಯಾಪಿ ಯಶಸ್ವಿಯಾಗಿ ಜಾರಿಗೊಳಿಸಲಿಲ್ಲ. ಈಗ ಪ್ರಸ್ತಾವನೆ ಆಗಿರುವಂತೆ ಏನಾದರೂ ನೋಟುಗಳು ಬಂದರೆ ದೇಶದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳು ಆಗೋದಂತು ಅಕ್ಷರಶಃ ಸತ್ಯ.ಪಾಲಿಮರ್ ನೋಟುಗಳು ಮಾರುಕಟ್ಟೆಗೆ ಬಂದಿದ್ದರೂ ಈಗಿರುವ ಪೇಪರ್ ನೋಟುಗಳನ್ನು ತಕ್ಷಣವೇ ಹಿಂಪಡೆಯಲು ಆರ್‌ಬಿಐ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪೇಪರ್ ನೋಟುಗಳನ್ನು ರದ್ದುಗೊಳಿಸಿ ಪ್ಲಾಸ್ಟಿಕ್ ನೋಟುಗಳೇ ಬರುತ್ತವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಶುದ್ಧ ಸುಳ್ಳು ಎಂದು ಕೇಂದ್ರ ಸರ್ಕಾರ ಮತ್ತು ಪಿಐಬಿ ಫ್ಯಾಕ್ಟ್ ಚೆಕ್ ಈಗಾಗಲೇ ಸ್ಪಷ್ಟಪಡಿಸಿದೆ. ಅತಿ ಪ್ರಸ್ತುತ ಚಲಾವಣೆಯಲ್ಲಿರುವ ಎಲ್ಲಾ ಮಾನ್ಯ ನೋಟುಗಳು ಎಂದಿನಂತೆ ಮಾನ್ಯವಾಗಿರುತ್ತವೆ ಎಂದೂ ತಿಳಿಸಲಾಗಿದೆ,






