ಧಾರ್ಮಿಕ

ಕೋಟೇಶ್ವರ ಶ್ರೀ ಕೋದಂಡ ರಾಮ ಮಂದಿರದಲ್ಲಿ  ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ 

Views: 48

ಕುಂದಾಪುರ :ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರದಲ್ಲಿ ಶುಕ್ರವಾರ ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆಯು ಭಕ್ತಿತ್ಪೂರ್ವಕವಾಗಿ ವಿಜೃಂಭಣೆಯಿಂದ ನೆರವೇರಿತು.

ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್ – ವಾಣಿಶ್ರೀ ಹೆಬ್ಬಾರ್ ಪೂಜಾ ಅಧ್ವರ್ಯುಗಳಾಗಿದ್ದು, ವೇದಮೂರ್ತಿ ನಾಗರಾಜ ಭಟ್ ಪೂಜೆ ನೆರವೇರಿಸಿ, ಶ್ರೀ ವರಮಹಾಲಕ್ಷ್ಮೀ ಪೂಜಾ ಮಹತ್ವವನ್ನು ವಿವರಿಸಿದರು. ಮಹಿಳೆಯರು ಭಜನೆ, ಶ್ರೀ ಲಕ್ಷ್ಮೀ ಶೋಭಾನೆ, ಶ್ರೀ ಲಕ್ಷ್ಮೀ ಅಷ್ಟೋತ್ತರಶತ ನಾಮಾವಳಿ ಸಹಿತ ಕುಂಕುಮಾರ್ಚನೆ ಗೈದರು.

ಶ್ರೀ ಕೋದಂಡ ರಾಮ ಮಂದಿರ ಆಡಳಿತ ಸಮಿತಿಯ ಅಧ್ಯಕ್ಷ ಸತ್ಯಮೂರ್ತಿ, ಕಾರ್ಯದರ್ಶಿ ವೈ. ಎನ್. ವೆಂಕಟೇಶಮೂರ್ತಿ ಭಟ್, ಸಹಕಾರ್ಯದರ್ಶಿ ಗಜೇಂದ್ರ ಹೆಬ್ಬಾರ್, ಸದಸ್ಯರು, ಪೂರ್ವಾಧ್ಯಕ್ಷ ಶ್ರೀನಿವಾಸಮೂರ್ತಿ, ಬ್ರಾಹ್ಮಣ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯರು, ಸೀತಾರಾಮ ಧನ್ಯ, ಕೆ. ವಿ. ಕೆ. ಐತಾಳ ಇನ್ನಿತರರು ಉಪಸ್ಥಿತರಿದ್ದರು.

Related Articles

Back to top button
error: Content is protected !!