ಸಾಮಾಜಿಕ
ಕೋಟೇಶ್ವರ :ಪತ್ನಿ, ಮಕ್ಕಳಿಗೆ ಹಿಂಸೆ ನೀಡಿ ಜೀವ ಬೆದರಿಕೆ, ದೂರು
Views: 199
ಕನ್ನಡ ಕರಾವಳಿ ಸುದ್ದಿ: ಪತ್ನಿ ಹಾಗೂ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ ಕುರಿತು ಪತ್ನಿ ಕೋಟೇಶ್ವರದ ಆಸ್ಯಾ (42) ಅವರು ನೀಡಿದ ದೂರಿನಂತೆ ಪತಿ ಶೇಕ್ ಮಹಮ್ಮದ್ ಇಲಿಯಾಸ್ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೇಕ್ ಮಹಮ್ಮದ್ ವಿದೇಶದಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಆಗಾಗ ಊರಿಗೆ ಬಂದು ಹೋಗುತ್ತಿದ್ದರು. ನನ್ನ ಜತೆ ಯಾವುದೇ ಸಂಪರ್ಕ ಇರಿಸಿಕೊಳ್ಳದೆ, ಖರ್ಚಿಗೂ ಹಣ ನೀಡುತ್ತಿರಲಿಲ್ಲ ಹಾಗೂ ಮಕ್ಕಳನ್ನು ನೋಡಿಕೊಳ್ಳುತ್ತಿರಲಿಲ್ಲ. ಕಳೆದ ಜು. 17ರಂದು ಪುತ್ರನಿಗೆ ಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ನನಗೂ ಬೆಲ್ಟ್ನಿಂದ ಹಲ್ಲೆ ಮಾಡಿದ್ದರು. ಅನಂತರ ಅಕ್ಟೋಬರ್‌ನಲ್ಲಿ ಊರಿಗೆ ಬಂದು ನನ್ನ ಚಿನ್ನ ತೆಗೆದುಕೊಂಡು ಹೋಗಿದ್ದು, ಕಳೆದ ಜ. 13ರಂದು ಅಂಚೆ ಮೂಲಕ ತಲಾಖ್ ನೋಟಿಸ್ ನೀಡಿರುತ್ತಾರೆ. ಆತ ನನಗೆ ಹಾಗೂ ಮಕ್ಕಳಿಗೆ ದೈಹಿಕ ಹಾಗೂ ಮಕ್ಕಳಿಗೆ ಮಾನಸಿಕ ಹಿಂಸೆ ನೀಡಿ, ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.






