ಇತರೆ
ಕೋಟೇಶ್ವರ ಕೃಷ್ಣ ಶೆಟ್ಟಿಗಾರ್ ನಿಧನ
Views: 431
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ದಿ. ಗೋವಿಂದ ಶೆಟ್ಟಿಗಾರ ಅವರ ಐದು ಜನ ಮಕ್ಕಳಲ್ಲಿ ಹಿರಿಯರಾದ ಕೃಷ್ಣಶೆಟ್ಟಿಗಾರ್ (63) ಅವರು ಎ.9ರಂದು ಮಂಗಳೂರಿನಲ್ಲಿ ನಿಧನರಾದರು.
ಮೃತರ ತಾಯಿ, ಪತ್ನಿ ಪುತ್ರ ತುಂಬು ಕುಟುಂಬದವರನ್ನು ಅಗಲಿದ್ದಾರೆ.
ಕೃಷ್ಣ ಶೆಟ್ಟಿಗಾರ್ ಅವರು ಕಳೆದ ಐದು ದಿನಗಳ ಹಿಂದೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.ಇಂದು ಅವರು ಲೋ ಬಿಪಿಯಿಂದ ಉಲ್ಬಣಗೊಂಡು ಹೃದಯಾಘಾತಕ್ಕೆ ಒಳಗಾಗಿ ಬೆಳಿಗ್ಗೆ 11:30ಕ್ಕೆ ನಿಧನರಾದರು.
ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಫಸ್ಟ್ ಗ್ರೇಡ್ ಕ್ಲರ್ಕ್ ಆಗಿ ನಿವೃತ್ತರಾಗಿದ್ದರು. ನಂತರ ಅವರು ಪೆನ್ಷನ್ ನರ್ ಸಂಘದಲ್ಲಿ ಜೊತೆ ಕಾರ್ಯದರ್ಶಿಯಾಗಿದ್ದರು. ಕೋಟೇಶ್ವರ ಪದ್ಮಶಾಲಿ ಸಮಾಜ ಸಂಘದಲ್ಲಿ ಸಕ್ರಿಯರಾಗಿ, ದಾನಿಯಾಗಿದ್ದರು.ಕೃಷ್ಣಶೆಟ್ಟಿಗಾರ್ ನಿಧಾನಕ್ಕೆ ಸಮಾಜ ಬಾಂಧವರು ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.






