ಧಾರ್ಮಿಕ

ಕೋಟಿಲಿಂಗೇಶ್ವರ ದೇಗುಲಕ್ಕೆ ನೂತನ ರಜತ ರಥ ಸಮರ್ಪಣೆ

Views: 106

ಕೋಟೇಶ್ವರ :ಶ್ರೀಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇಗುಲಕ್ಕೆ ನೂತನವಾಗಿ ನಿರ್ಮಾಣಗೊಂಡಿರುವ ರಜತ ರಥವು ಕೋಟೇಶ್ವರ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಿಂದ ಭವ್ಯ ಮೆರವಣಿಗೆ ಮೂಲಕ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ವಿಶೇಷ ಪೂಜಿ ಸಲ್ಲಿಸಲಾಯಿತು.

ಅಪರಾಹ್ನ ಅಲಂಕೃತ ವಾಹನದಲ್ಲಿ ನೂತನ ಬೆಳ್ಳಿ ರಥ ಪೇಟೆಯಲ್ಲಿ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ತಟ್ಟಿರಾಯ, ಕೀಲು ಕುದುರೆ, ಟ್ಯಾಬ್ಲೊ, ಚಂಡೆ ವಾದನ ಸಹಿತ ಭವ್ಯ ಮೆರವಣಿಗೆಯಲ್ಲಿ ದೇಗುಲಕ್ಕೆ ಸಾಗುತ್ತಿದ್ದಂತೆ ಬೃಹ್ಮರಥೋತ್ಸವ ಸಂದರ್ಭದಲ್ಲಿ ರಥಕ್ಕೆ ಗರುಡ ಪ್ರದಕ್ಷಿಣೆ ಬರುವುದು ವಾಡಿಕೆ, ಅದೇ ರೀತಿಯಲ್ಲಿ ಈ ಸಂದರ್ಭದಲ್ಲಿ ರಜತ ರಥಕ್ಕೆ  ಗರುಡನಿಂದ ಪುಷ್ಪಾರ್ಚನೆ ಸಲ್ಲಿಸಿ, ಸ್ವಾಗತಿಸಲಾಯಿತು.

ದೇವಾಲಯದ ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಗಣ್ಯ ವ್ಯಕ್ತಿಗಳು, ಗ್ರಾಮಸ್ಥರು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Related Articles

Back to top button
error: Content is protected !!