ಕೋಟ:ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಓರ್ವ ಮೀನುಗಾರ ಸಾವು, ಇಬ್ಬರು ಪ್ರಾಣಾಪಾಯದಿಂದ ಪಾರು

Views: 60
ಕನ್ನಡ ಕರಾವಳಿ ಸುದ್ದಿ:ನಾಡದೋಣಿಯ ಮೂಲಕ ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಹಿನ್ನಲ್ಲೆಯಲ್ಲಿ ಅದರಲ್ಲಿದ್ದ ಓರ್ವ ಮೀನುಗಾರ ಮೃತಪಟ್ಟು, ಇಬ್ಬರು ಪ್ರಾಣಪಾಯದಿಂದ ಪಾರಾದ ಘಟನೆ ಸಾಸ್ತಾನದ ಕೋಡಿತಲೆ ಅಳಿವೆ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಶುಕ್ರವಾರ ಮುಂಜಾನೆ ಶಂಕರ್ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಅಕ್ಷಯ ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ಶರತ್ ಖಾರ್ವಿ ಈ ಮೂವರು ಮೀನುಗಾರರು ಮೀನುಗಾರಿಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೂವರು ನೀರುಪಾಲಗಿದ್ದರು.
ಅಕ್ಷಯ ಖಾರ್ವಿ ಹಾಗೂ ಮಂಜುನಾಥ್ ಖಾರ್ವಿ ಅವರು ಈಜಿ ದಡ ಸೇರಿದ್ದರು. ಆದರೆ ಶರತ್ ಖಾರ್ವಿ ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿರು. ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದ ಮಂಜುನಾಥ್ ಖಾರ್ವಿ, ಅಕ್ಷಯ್ ಖಾರ್ವಿ ಇಬ್ಬರು ಮೀನುಗಾರರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೋಣಿ ಸಮುದ್ರ ಪಾಲಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.