ಧಾರ್ಮಿಕ
ಕೋಟ:ನಾಗಬನದಲ್ಲಿ ಹೋಮ ನಡೆಯುತ್ತಿದ್ದ ವೇಳೆ ಹೆಚ್ಚೇನು ದಾಳಿ, ಹಲವರಿಗೆ ಗಾಯ

Views: 100
ಕನ್ನಡ ಕರಾವಳಿ ಸುದ್ದಿ: ನಾಗಬನದಲ್ಲಿ ಸರ್ಪಸಂಸ್ಕಾರ ನಡೆಯುತ್ತಿದ್ದ ವೇಳೆ ಹೋಮದ ಹೊಗೆಯಿಂದ ಕೆರಳಿದ ಹೆಚ್ಚೇನು ಅಲ್ಲಿದ್ದ ಜನರ ದಾಳಿ ಹಲವರು ಗಾಯಗೊಂಡ ಘಟನೆ ಮಣೂರಿನಲ್ಲಿ ಬುಧವಾರ ನಡೆದಿದೆ.
ನಾಗಬನದ ಸಮೀಪ ಇದ್ದ ಹೆಚ್ಚೇನು ಗೂಡು ಸರ್ಪ ಸಂಸ್ಕಾರದ ಸಂದರ್ಭ ಗಮನಕ್ಕೆ ಬಂದಿರಲಿಲ್ಲ. ಹೋಮದ ಹೊಗೆ ಮೇಲೇಳುತ್ತಿದ್ದಂತೆ ಕೆರಳಿದ ಜೇನು ಹುಳುಗಳು ದಾಳಿ ಆರಂಭಿಸಿದವು. ಇಬ್ಬರು ಮಹಿಳೆಯರು ಹಾಗೂ ಐವರು ಪುರುಷರು ಗಾಯಗೊಂಡಿದ್ದಾರೆ.
ರಕ್ಷಣೆಗೆ ಧಾವಿಸಿದ ಸ್ಥಳೀಯರ ಮೇಲೂ ದಾಳಿ ಮಾಡಿ ಗಾಯಗೊಂಡರು. ಪೂಜೆ ನಡೆಯುತ್ತಿದ್ದ ಸ್ಥಳದಲ್ಲಿ ಅಧಿಕ ಪ್ರಮಾಣದಲ್ಲಿ ಹೊಗೆ ಆವರಿಸಿದ್ದ ಕಾರಣ ಅಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಜೀವನ್ ಮಿತ್ರ ನಾಗರಾಜ್ ಪುತ್ರನ್ ಕೋಟ ಅವರು ಗಾಯಾಳುಗಳನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.






