ಶಿಕ್ಷಣ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜು: ಪೋಷಕರ ಸಭೆ 

Views: 96

ಕನ್ನಡ ಕರಾವಳಿ ಸುದ್ದಿ: ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ 2025–26 ನೇ ಶೈಕ್ಷಣಿಕ ಸಾಲಿನ ಮೂರನೇ ಪೋಷಕರ ಸಭೆಯನ್ನು ನಡೆಸಲಾಗಿದ್ದು ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವಿರೂಪಾಕ್ಷ ದೇವರಮನೆ,ಮನೋವೈದ್ಯರು ಡಾ. ಎ ವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆ ಉಡುಪಿ ಇವರು ಆಗಮಿಸಿ ಇಂದಿನ ವಿದ್ಯಾರ್ಥಿಗಳು ಬಹಳ ಸೂಕ್ಷ್ಮ ಸ್ವಭಾವದವರು.ಮೊಬೈಲ್ ಗೀಳಿನಿಂದ ಓದುವಿಕೆಯಲ್ಲಿ ನಿರಾಸಕ್ತಿ ಹೊಂದಿ ಮಾದಕ ದ್ರವ್ಯ ಗಳಿಗೆ ದಾಸರಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ.ಓದಿನ ಮಹತ್ವ ತಿಳಿಯದೆ ನಂತರ ಪಶ್ಚಾತಾಪ ಪಟ್ಟುಕೊಂಡು ಕೊರಗುತ್ತಾರೆ .ಇಂತಹ ಸಮಸ್ಯೆಯಿಂದ ಅವರನ್ನು ಹೊರ ತರಲು ಹಾಗೂ ತಪ್ಪು ದಾರಿ ಹಿಡಿಯದ ಹಾಗೆ ನೋಡಿಕೊಳ್ಳೋದು ಶಿಕ್ಷಕರ ಹಾಗೂ ಪೋಷಕರ ಪಾತ್ರ ಬಹಳ ದೊಡ್ದದು. ಈ ಸಂದರ್ಭದಲ್ಲಿ ಪೋಷಕರು ಮತ್ತು ಶಿಕ್ಷಕರು ಕಠಿಣ ಶ್ರಮ ವಹಿಸಿ ವಿದ್ಯಾರ್ಥಿಗಳ ಪ್ರತಿಯೊಂದು ಕೆಲಸವನ್ನು ಗಮನಿಸಬೇಕು ಮತ್ತು ಅವರಿಗೆ ಸೂಕ್ತ ಸಲಹೆಯನ್ನು ನೀಡಬೇಕು.ಅವರಿಗೆ ಪ್ರೇರಣೆ ನೀಡಿ ಒಳ್ಳೆಯ ಅವಕಾಶಗಳನ್ನು ಒದಗಿಸಿಕೊಟ್ಟು ,ಅವರಲ್ಲಿ ಸಾಧಿಸುವ ಛಲ ಬೆಳಸಿ ,ಅವರಲ್ಲಿ ಧೈರ್ಯ ತುಂಬಿ ಒಳ್ಳೆಯ ಸಾಧನೆ ಮಾಡುವ ಹಾಗೆ ಪ್ರೇರೇಪಿಸಬೇಕು.ಹಾಗೆ ಮಾಡಿದ್ದಲ್ಲಿ ಅವರಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ರಘುರಾಮ್ ದೇವಾಡಿಗ, ಸದಸ್ಯರು ವ್ಯವಸ್ಥಾಪನಾ ಸಮಿತಿ ,ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪೋಷಕರ ಪಾತ್ರದ ಮಹತ್ವ ತಿಳಿಸಿದರು

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ (2014–15 ನೇ ಶೈಕ್ಷಣಿಕ ಸಾಲಿನ) ವಿಶ್ವನಾಥ ಶೆಟ್ಟಿ ಸಲ್ಕೋಡು ಇವರು ಸೆಪ್ಟಂಬರ್ ತಿಂಗಳಲ್ಲಿ ನೆಡೆದ ಸಿ ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದರಿಂದ ಕಾಲೇಜಿನ ವತಿಯಿಂದ ಸನ್ಮಾನಿ ಗೌರವಿಸಲಾಯಿತು ನಂತರ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಅಭ್ಯಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಕೆ ಬಾಬು ಶೆಟ್ಟಿ ತೆಗ್ಗರ್ಸೆ ,ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರು ವಹಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರ ಕೂಡ ಮಹತ್ವ ವಹಿಸುತ್ತದೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿಯೊಂದಿಗೆ ಮಕ್ಕಳ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಪ್ರಥಮ ಕಲಾ ವಿಭಾಗದ ಸಾವಂತ, ಶಮಿತಾ ದ್ವಿತೀಯ ಕಲಾ ವಿಭಾಗದ ಸುದೀಪ, ಗಣೇಶ. ಪ್ರಥಮ ವಾಣಿಜ್ಯ ವಿಭಾಗದ ಸಂಜನಾ, ರಿಷಿಕಾ. ದ್ವಿತೀಯ ವಾಣಿಜ್ಯ ವಿಭಾಗದ ಪಂಚಮಿ, ಸಂಜನಾ ಹಾಗೂ ಕೊಲ್ಲೂರಿನಲ್ಲಿ ಯಾತ್ರಾರ್ಥಿ ಒಬ್ಬರು ಕಳೆದುಕೊಂಡ ಪರ್ಸ್ ಮತ್ತು ಮೊಬೈಲನ್ನು ಪೊಲೀಸ್ ಸ್ಟೇಷನ್ ಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಪ್ರಥಮ ವಾಣಿಜ್ಯ ವಿಭಾಗದ ಬಾಹುಬಲಿ ಇವರುಗಳ ಪೋಷಕರನ್ನು ಗೌರವಿಸಲಾಯಿತು ಹಾಗೂ ಆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಗಣೇಶ್ , ನಿರೂಪ, ದಿಗಂತ , ಯಶಸ್, ದಿಗಂತ , ರೋಹಿತ್, ಸುಬ್ರಮಣ್ಯ , ಕಾರ್ತಿಕ.ಇವರುಗಳ ಪೋಷಕರನ್ನು ಗೌರವಿಸಲಾಯಿತು ಹಾಗೂ ಸಂಸ್ಥೆಯ ಹಿಂದಿನ ವಿದ್ಯಾರ್ಥಿನಿ ಆಶಾ ಶೆಟ್ಟಿ ಕೊಡಮಾಡಿದ ಶೂ ಗಳನ್ನು ಆಟಗಾರರಿಗೆ ವಿತರಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ ಬಿ ಅತಿಥಿಗಣ್ಯರನ್ನು ಸ್ವಾಗತಿಸಿದರು ಹಾಗೂ ಆಂಗ್ಲಭಾಷಾ ಉಪನ್ಯಾಸಕಿ ಪೂರ್ಣಿಮಾ ಎನ್ ಜೋಯಿಸ್ ಕಾರ್ಯಕ್ರಮದ ನಿರೂಪಣೆಯೊಂದಿಗೆ ಧನ್ಯವಾದ ಸಮರ್ಪಿಸಿದರು. ಪೋಷಕರ ಸಭೆಯಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.

Related Articles

Back to top button