ಇತರೆ

ಕುಂದಾಪುರ:ಮರವಂತೆಯಲ್ಲಿ ಬೈಕ್ ಡಿಕ್ಕಿ,ಪಾದಾಚಾರಿ ಸಾವು

Views: 396

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪ ಮರವಂತೆಯಲ್ಲಿ ಪಾದಾಚಾರಿಯೊಬ್ಬರಿಗೆ ಬೈಕೊಂದು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ

ರಾಜು ಮೊಗವೀರ (46) ಮೃತಪಟ್ಟವರು.

ಮರವಂತೆ ಗ್ರಾಮದ ನಿರೋಣಿ ಐಸ್‌ ಪ್ಲಾಂಟ್‌ ಎದುರು ತನ್ನ ಹೆಂಡತಿಗಾಗಿ ಕಾಯುತ್ತಿರುವಾಗ ಸಂಜೆ ಹೊತ್ತಿಗೆ ಕುಂದಾಪುರ ಬೈಂದೂರು ಕಡೆಗೆ ತಮ್ಮ ಮನೆಗೆ ನಡೆದುಕೊಂಡು ಹೋಗಲು ರಸ್ತೆಯ ಅಂಚಿನಲ್ಲಿ ಬರುತ್ತಾ ಅವರ ಎದುರುಗಡೆ ಮೋಟಾರ್‌ ಸೈಕಲ್‌ ಸವಾರ ಅಕ್ಷಯ್‌ ಅತಿವೇಗ ಹಾಗೂ ಅಜಾಗುರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜು ಮೊಗವೀರರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಮುಖಕ್ಕೆ ರಕ್ತಗಾಯವಾಗಿದ್ದು, ಕೂಡಲೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!