Views: 533
ಕನ್ನಡ ಕರಾವಳಿ ಸುದ್ದಿ: ಕು. ಶ್ರಾವ್ಯ ಶ್ರೀನಿವಾಸ್ ಶೆಟ್ಟಿಗಾರ್ ಕರಿಯಾಕಲ್ ಕಾರ್ಕಳ ಇವರಿಗೆ ಎಂಬಿಎ ವಾರ್ಷಿಕ ಪರೀಕ್ಷೆಯಲ್ಲಿ ಎರಡನೇ ರ‍್ಯಾಂಕ್ ಪಡೆದು ಕೀರ್ತಿ ತಂದಿದ್ದಾರೆ.
ಈಕೆ ನಿಟ್ಟೆ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ರ‍್ಯಾಂಕ್ ವಿಜೇತೆ ಶ್ರಾವ್ಯ ಶ್ರೀನಿವಾಸ್ ಶೆಟ್ಟಿಗಾರ ಅವರನ್ನು ಗೌರವಿಸಲಾಯಿತು.
ಇವರು ಕಾರ್ಕಳದ ಕರಿಯಾಕಲ್ ಶ್ರೀಮತಿ ಸುಜಾತ ಮತ್ತು ಶ್ರೀನಿವಾಸ ಆರ್ ಶೆಟ್ಟಿಗಾರ್ ದಂಪತಿಯ ಪುತ್ರಿ. ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ( ರಿ) ಹಾಗೂ ಉಡುಪಿ ಕಿನ್ನಿ ಮುಲ್ಕಿಯ ಶ್ರೀ ವೀರಭದ್ರ ಶಾಂತದುರ್ಗಾ ದೇವಸ್ಥಾನದ ಸದಸ್ಯರಾಗಿರುತ್ತಾರೆ.






