ಕುಂದಾಪುರದಲ್ಲಿ 33 ಕ್ವಿಂಟಾಲ್ ಅನ್ನಭಾಗ್ಯದ ಅಕ್ರಮ ಅಕ್ಕಿ ದಾಸ್ತಾನು ಪತ್ತೆ
Views: 286
ಕನ್ನಡ ಕರಾವಳಿ ಸುದ್ದಿ:ಕುಂದಾಪುರದಲ್ಲಿ 33 ಕ್ವಿಂಟಾಲ್ ಅನ್ನಭಾಗ್ಯದ ಅಕ್ರಮ ಅಕ್ಕಿ ದಾಸ್ತಾನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಳ್ಳಲಾಯಿತು.
ಕುಂದಾಪುರದ ಆಹಾರ ನಿರೀಕ್ಷಕ ಎಚ್.ಎಸ್. ಸುರೇಶ್ ಅವರು ಪೊಲೀಸರ ನೇತೃತ್ವದಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು 33 ಕ್ವಿಂಟಾಲ್ ‘ಅನ್ನಭಾಗ್ಯ’ದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಗುಲ್ವಾಡಿಯ ಕಂಬಳಗದ್ದೆಯ ಅಕ್ಕಿಗಿರಣಿಯಲ್ಲಿ ಶರತ್ ಶೆಟ್ಟಿ ಹಾಗೂ ಸಲಾಂ 62,100 ರೂ. ಮೌಲ್ಯದ 27 ಕ್ವಿ. ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವುದು ಪತ್ತೆಯಾಗಿದೆ.
ಅಕ್ಕಿಯನ್ನು ಅನ್ನಭಾಗ್ಯದ ಅಕ್ರಮವಾಗಿ ಆಮ್ಮಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವಾಸೀ ಅಕ್ರಂ ಎಂಬಾತನು 13,800 ರೂ. ಮೌಲ್ಯದ 6 ಕ್ವಿಂಟಾಲ್ ಅಕ್ಕಿಯನ್ನು 14 ಚೀಲಗಳಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಅಕ್ಕಿ ಹಾಗೂ ಕಾರು, ಇನ್ನಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ದ ಕುಂದಾಪುರ ಗ್ರಾಮಾಂತರ ಠಾಣೆ ಮತ್ತು ಶಂಕರ ನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






