ಇತರೆ
ಕೊರಳಿನಲ್ಲಿದ್ದ ಶಾಲು ಗ್ರೈಂಡರ್‌ಗೆ ಸಿಲುಕಿ ಮಹಿಳೆ ದಾರುಣ ಸಾವು
Views: 72
ಕನ್ನಡ ಕರಾವಳಿ ಸುದ್ದಿ: ಗೃಹಿಣಿಯ ಕೊರಳಿನಲ್ಲಿದ್ದ ಶಾಲು ಗ್ರೈಂಡರ್‌ಗೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ವರ್ಕಾಡಿ ಪಂಚಾಯತಿನ ಕಲ್ಮಂಜ ಗ್ರಾಮದ ಅಬ್ದುಲ್ಲ ಖಾದರ್ ಅವರ ಪತ್ನಿ ಮೈಮೂನ ( 40) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮೈಮೂನ ಅವರು ಗ್ರೈಂಡರ್ ನಲ್ಲಿ ಮೆಣಸು ಕಡೆಯುವಾಗ ಈ ಅನಾಹುತ ಸಂಭವಿಸಿದೆ. ಅಪಾಯಕ್ಕೆ ಸಿಲುಕಿದ್ದ ಅವರನ್ನು ಕೂಡಲೇ ಕೋಣಾಜೆ ಬಳಿಯ ಕಣಚೂರು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮೃತಪಟ್ಟಿದ್ದರು.
ಈ ಸಂಬಂಧ ಮಂಜೇಶ್ವರ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.






