ಕೈ ಆಪರೇಷನ್ ಆಟಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಮಹಾ ಪ್ಲಾನ್, ಪಕ್ಷ ಬಿಡಲ್ಲ ಎಂದು ಶಾಸಕರಿಂದ ಹಾಸನಾಂಬೆ ಮೇಲೆ ಪ್ರಮಾಣ?

Views: 0
ಹಾಸನಾಂಬೆಯ ಸನ್ನಿಧಿಯಲ್ಲಿ ಜೆಡಿಎಸ್ ಶಾಸಕರು ಜೆಡಿಎಸ್ ಬಿಡಲ್ಲವೆಂದು ದಳಪತಿಗಳೆದುರು ಆಣೆ ಮಾಡಿದ್ದಾರೆ ಎನ್ನಲಾಗಿದೆ. ಹಾಸನಾಂಬೆಯ ಮೇಲೆ ಆಣೆ ಮಾಡಿ ಪಕ್ಷಕ್ಕೆ ನಿಷ್ಠೆಯಿಂದ ಇರೋದಾಗಿ ಕುಮಾರಸ್ವಾಮಿಗೆ ಭರವಸೆ ಸಿಕ್ಕಿದೆ.
ಆಪರೇಷನ್ ಹಸ್ತ ದಳಪತಿಗಳಿಗೆ ಭೀತಿ ಶುರುವಾಗಿದೆ. ಜೆಡಿಎಸ್ ಶಾಸಕರ ಆಪರೇಷನ್ಗೆ ಲಗಾಮು ಹಾಕಲು ಮಾಜಿ ಸಿಎಂ ಹೆಚ್ಡಿಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈ ಆಪರೇಷನ್ ಭೀತಿಯನ್ನು ಹೋಗಲಾಡಿಸಲು ದಳಪತಿಗಳು ಮೊರೆ ಹೋಗಿದ್ದು,
ಕೇಸರಿ ಹಾಗೂ ಹಸಿರಿನ ಮಹಾ ಸಮ್ಮಿಲನ. ತೆನೆ ಹೊತ್ತ ಮಹಿಳೆ ಕಮಲ ಮುಡಿಯುತ್ತಿದ್ದಂತೆ ದಳಪತಿಗಳು ಹೈಅಲರ್ಟ್ ಆಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋದು ಆಪರೇಷನ್. ಹಸ್ತಪಾಳಯ 135 ಸ್ಥಾನಗಳನ್ನು ಗಳಿಸಿ ಬಹುಮತದೊಂದಿಗೆ ಸರ್ಕಾರ ರಚಿಸಿದ್ರೂ ಕೈ ನಾಯಕರು ಆಗಾಗ್ಗೆ ಆಪರೇಷನ್ ಎಂಬ ಬಾಣವನ್ನು ಎದುರಾಳಿಗಳ ಮೇಲೆ ಪ್ರಯೋಗಿಸ್ತಿದ್ದಾರೆ.
ಆಪರೇಷನ್ ಆಟಕ್ಕೆ ಬ್ರೇಕ್ ಹಾಕಲು ಜೆಡಿಎಸ್ ನಾಯಕರು ಮಹಾ ಪ್ಲಾನ್ ಮಾಡಿದ್ದಾರೆ.ಕಾಂಗ್ರೆಸ್ನ ಆಪರೇಷನ್ ಎಂಬ ಭೀತಿ ದಳಪತಿಗಳನ್ನು ಇನ್ನಿಲ್ಲದಂತೆ ಕಾಡ್ತಿದೆ. ಈ ಪೆಡಂಭೂತವನ್ನು ಹೊಡೆದೋಡಿಸಲು ಜೆಡಿಎಸ್ ನಾಯಕರು ಶಕ್ತಿದೇವತೆ ಹಾಸನಾಂಬೆಯ ಮೊರೆ ಹೋಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಮಾಜಿ ಸಿಎಂ ಹೆಚ್ಡಿಕೆ ಸೇರಿದಂತೆ ಜೆಡಿಎಸ್ ಶಾಸಕರೆಲ್ಲ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದರು. ಇದಕ್ಕೆ ಕಾರಣಗಳು ಎರಡು. ಒಂದು ಶಕ್ತಿ ದೇವತೆ ಹಾಸನಾಂಬೆಯ ದರ್ಶನ ಪಡೆಯೋದು. ಮತ್ತೊಂದು ಆಪರೇಷನ್ ಹಸ್ತದಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಂಡು ಡಿಕೆಶಿ ಬೇಟೆಗೆ ಚೆಕ್ಮೇಟ್ ಕೊಡೋದು.
ಹಾಸನಾಂಬೆಯ ಸನ್ನಿಧಿಯಲ್ಲಿ ಜೆಡಿಎಸ್ ಶಾಸಕರು ಜೆಡಿಎಸ್ ಬಿಡಲ್ಲವೆಂದು ದಳಪತಿಗಳೆದುರು ಆಣೆ ಮಾಡಿದ್ದಾರೆ ಎನ್ನಲಾಗಿದೆ. ಹಾಸನಾಂಬೆಯ ಮೇಲೆ ಆಣೆ ಮಾಡಿ ಪಕ್ಷಕ್ಕೆ ನಿಷ್ಠೆಯಿಂದ ಇರೋದಾಗಿ ಕುಮಾರಸ್ವಾಮಿಗೆ ಭರವಸೆ ಸಿಕ್ಕಿದೆ. ಈ ಆಣೆ ಪ್ರಮಾಣದಿಂದ ಕಾಂಗ್ರೆಸ್ ಆಪರೇಷನ್ ಆಟಕ್ಕೆ ದಳಪತಿಗಳು ಬ್ರೇಕ್ ಹಾಕುವ ಲೆಕ್ಕಾಚಾರದಲ್ಲಿದ್ದಾರೆ.
ಹಾಸನದಲ್ಲಿ ನಡೆದಿದ್ದ ಜೆಡಿಎಸ್ ಶಾಸಕರ ಜೊತೆಗಿನ ಸಭೆಯಲ್ಲಿ ಕುಮಾರಸ್ವಾಮಿ ಸೇರಿ 18 ಶಾಸಕರು ಹಾಜರು ಎಲ್ಲ ಶಾಸಕರ ಜೊತೆ ಒನ್ ಟು ಒನ್ ಚರ್ಚೆ ನಡೆಸಿದ ಹೆಚ್ಡಿಕೆ ಮೈತ್ರಿ ಏಕೆ ಅನಿವಾರ್ಯ ಅಂತ ಮನವರಿಕೆ ಮಾಡಿಕೊಟ್ಟಿದ್ದಾರೆ ಜೊತೆಗೆ ಕಾಂಗ್ರೆಸ್ನಲ್ಲಿರುವ ಆಂತರಿಕ ಕಚ್ಚಾಟದ ಬಗ್ಗೆ ಚರ್ಚೆ ಲೋಕಸಭೆ ಬಳಿಕ ರಾಜ್ಯ ರಾಜಕೀಯದಲ್ಲಿ ಏನಾದ್ರೂ ಆಗಬಹುದು ಆದ್ದರಿಂದ ದುಡುಕಿನ ನಿರ್ಧಾರ ತಗೋಬೇಡಿ ಅಂತ ಕಿವಿಮಾತು.ಕಾಂಗ್ರೆಸ್ ನಾಯಕರ ಆಮಿಷಕ್ಕೆ ಒಳಗಾಗಬೇಡಿ ಅಂತ ತಿಳುವಳಿಕೆ ಹಾಸನಾಂಬೆಯ ಸನ್ನಿಧಿಯಿಂದಲೇ ಒಗ್ಗಟ್ಟು ಪ್ರದರ್ಶನ ಮಾಡೋಣ ಎಂದಿದ್ದಾರೆ.
ಈ ಮೂಲಕ ಹೆಚ್ಡಿಕೆ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದಿದ್ದಾರೆ. ವಲಸೆ ಶಾಸಕರಿಗೆ ಬ್ರೇಕ್ ಹಾಕುವ ಜೊತೆಗೆ ಡಿಕೆ ರಣತಂತ್ರಕ್ಕೆ ಪ್ರತಿ ತಂತ್ರ ಹೆಣೆಯುವ ಮೂಲಕ ಕಾಂಗ್ರೆಸ್ಗೆ ಕುಮಾರಸ್ವಾಮಿ ಚೆಕ್ಮೇಟ್ ಕೊಟ್ಟಿದ್ದಾರೆ.






