ಇತರೆ

ಕೆರೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

Views: 0

ವಿಜಯಪುರ :ಇಲ್ಲಿಗೆ ಸಮೀಪ ಅಮಾನಿ ಕೆರೆಯಲ್ಲಿ ಶನಿವಾರ ಈಜಲು ತೆರಳಿದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಪಟ್ಟಣದ ಕೆರೆ ಕೋಡಿ ಗ್ರಾಮದ ನಿವಾಸಿಗಳಾದ ಕಾರ್ತಿಕ್( 15) ಗುರುಪ್ರಸಾದ್( 16) ಧನುಷ್ (10) ಮೃತಪಟ್ಟ ವಿದ್ಯಾರ್ಥಿಗಳು.

ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರುವ ವಿದ್ಯಾರ್ಥಿಗಳು.

ಶನಿವಾರ ಶಾಲೆ ಮುಗಿಸಿಕೊಂಡು ಶಾಲಾ ಬ್ಯಾಗನ್ನು ಇಟ್ಟು ,ಸೈಕಲ್ ನಲ್ಲಿ ಮನೆಯಿಂದ ಹೊರಗೆ ಹೋದವರು ಸಂಜೆಯಾದರೂ ಮನೆಗೆ ಬರೆದಿದ್ದನ್ನು ಗಮನಿಸಿದ ಪೋಷಕರು ಎಲ್ಲಾ ಕಡೆ ಹುಡುಕಿದರೂ ಮಕ್ಕಳು ಸಿಗದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಭಾನುವಾರ ಬೆಳಿಗ್ಗೆ ಕೆರೆಯ ಹತ್ತಿರ ಸೈಕಲ್ ಗಳು ಪತ್ತೆಯಾಗಿದ್ದು, ನೀರಿನಲ್ಲಿ ಮೃತದೇಹಗಳು ಪತ್ತೆಯಾಗಿದೆ. ಕೂಡಲೇ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಪ್ರವರ್ತರಾಗಿ ಮೂರು ಮೃತದೇಹಗಳನ್ನು ಕೆರೆಯಿಂದ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Related Articles

Back to top button
error: Content is protected !!