ಇತರೆ

ಕೆರೆಗೆ ಈಜಲು ತೆರಳಿದ್ದ ನಾಲ್ವರು ಬಾಲಕರು ನೀರು ಪಾಲು 

Views: 119

ಹಾಸನ: ಶಾಲೆಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳು ಕೆರೆಗೆ ಈಜಲೆಂದು ತೆರಳಿದ ನಾಲ್ಕು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ.

ಐಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೀವನ್ (13), ಸಾತ್ವಿಕ್ (11), ಪೃಥ್ವಿ (12) ಹಾಗೂ ವಿಶ್ವ (12) ಸಾವನ್ನಪ್ಪಿದ ಮಕ್ಕಳು. ಬಾಳಿ ಬದುಕಬೇಕಿದ್ದ ಮಕ್ಕಳು ಜೀವ ಕಳೆದುಕೊಂಡಿದ್ದಾರೆ.

ಒಟ್ಟು ಐವರು ಮಕ್ಕಳು ಕೆರೆಯೊಂದರಲ್ಲಿ ಈಜಲು ತೆರಳಿದ್ದರು. ಇದರಲ್ಲಿ ನಾಲ್ವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಕೆರೆಗೆ ತೆರಳಿದ್ದ ಐವರಲ್ಲಿ ಬದುಕುಳಿದಿದ್ದ ಓರ್ವ ಚಿರಾಗ್ ಎಂಬ ಬಾಲಕ, ಸಮೀಪದಲ್ಲಿದ್ದವರಿಗೆ ಸುದ್ದಿ ತಿಳಿಸಿದ್ದಾನೆ. ಸ್ಥಳೀಯರು ಕೆರೆ ಬಳಿ ಬಂದು ನೋಡುವಷ್ಟರಲ್ಲಿ ಮುಳುಗಿದ್ದ ನಾಲ್ವರು ಬಾಲಕರು ನೀರಿನಲ್ಲಿ ಮುಳುಗಿದ್ದರು. ನಂತರ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದು, ಮಕ್ಕಳ ಮೃತದೇಹಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿಯಿಂದ ಶೋಧಕಾರ್ಯ ನಡೆಸಿ, ನಾಲ್ಕೂ ಮಕ್ಕಳ ಮೃತದೇಹವನ್ನು ಕರೆಯಿಂದ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು, ಜಿಲ್ಲಾಧಿಕಾರಿ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

 

 

Related Articles

Back to top button
error: Content is protected !!