ಕುಂದಾಪುರ: ವಂಡ್ಸೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಅವಳಿ ಸಹೋದರಿಯರಿಗೆ 10ನೇ ತರಗತಿಯಲ್ಲಿ ಸಮಾನ ಅಂಕ
Views: 94
ಕನ್ನಡ ಕರಾವಳಿ ಸುದ್ದಿ: ಅವಳಿ ಸಹೋದರಿಯರಿಬ್ಬರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಮಾನ ಅಂಕಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಮೀಕ್ಷಾ ಮತ್ತು ಪ್ರತೀಕ್ಷಾ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆಯಲ್ಲಿ ಮುಗಿಸಿದ್ದು ಬಳಿಕ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಲೆ-ನೆಂಪುವಿನಲ್ಲಿ ಪ್ರೌಢ ಶಿಕ್ಷಣ ಮುಂದುವರಿಸಿದ್ದರು.
10ನೇ ತರಗತಿ ವಿದ್ಯಾರ್ಥಿನಿಯರಾದ ಸಮೀಕ್ಷಾ ಎಸ್. ಪೂಜಾರಿ ಹಾಗೂ ಪ್ರತೀಕ್ಷಾ ಎಸ್. ಪೂಜಾರಿ ಇಬ್ಬರೂ ಕೂಡ 602 (96.32%) ಅಂಕಗಳನ್ನು ಪಡೆದಿದ್ದಾರೆ.ಇವರಿಬ್ಬರೂ ಕೂಡಾ ಕಲಿಕೆಯಲ್ಲೂ ಸಾಮ್ಯತೆ ಹೊಂದಿದ್ದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಂದೇ ರೀತಿ ಅಂಕ ಪಡೆದಿರುವುದು ವಿಶೇಷವಾಗಿದೆ.
ಹಿಂದಿಯಲ್ಲಿ ಇಬ್ಬರಿಗೂ ಸಮಾನ ಸಮಾನ ಅಂಕ 99 ಬಂದಿದೆ. ಉಳಿದಂತೆ ಪ್ರತೀಕ್ಷಾ/ಸಮೀಕ್ಷಾಗೆ ಇಂಗ್ಲಿಷ್ ನಲ್ಲಿ 98 / 97, ಕನ್ನಡ 123/ 124, ಸಮಾಜ ವಿಜ್ಞಾನ 100 /98, ಗಣಿತ 89 / 94 ಮತ್ತು ವಿಜ್ಞಾನದಲ್ಲಿ 93 / 90 ಅಂಕಗಳು ಲಭಿಸಿವೆ.
ಇವರು ಬಸ್ರೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ, ಇಸಿಒ ಆಗಿ ಕರ್ತವ್ಯ ನಿರ್ವಹಿಸಿದ ಸಂತೋಷ್ ಹಾಗೂ ಪ್ರೇಮಾ ದಂಪತಿಯ ಪುತ್ರಿಯರು.
ತಂದೆಯು ಸರಕಾರಿ ಶಾಲೆಯ ಶಿಕ್ಷಕರಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿಯೇ ಓದಿಸಿ ಮಾದರಿಯಾಗಿದ್ದಾರೆ.






