ಕೃಷಿ

ಕುಂದಾಪುರ: ರೈತನೊಬ್ಬ ಫೈನಾನ್ಸ್ ನಿಂದ ಲಕ್ಷಾಂತರ ಸಾಲ ಮಾಡಿ ಸಂಸ್ಥೆ ಹಣ ಪಡೆದು ಟ್ರ್ಯಾಕ್ಟರ್ ನೀಡದೆ ವಂಚನೆ

Views: 162

ಕುಂದಾಪುರ: ರೈತನೊಬ್ಬ ಫೈನಾನ್ಸ್ ನಿಂದ ಲಕ್ಷಾಂತರ ಸಾಲ ಮಾಡಿ ಸಂಸ್ಥೆ ಹಣ ಪಡೆದು ಟ್ರ್ಯಾಕ್ಟರ್ ನೀಡದೆ ವಂಚನೆ

ಕುಂದಾಪುರ ಕೋಟೇಶ್ವರದ ಶೋರೂಮ್ ಒಂದರಲ್ಲಿ ಶ್ರೀಕಾಂತ್ ಎಂಬಾತ ಲಕ್ಷಾಂತರ ರೂಪಾಯಿ ಪಡೆದು ಬಳಿಕ ಟ್ರಾಕ್ಟರ್ ನೀಡದೇ ವಂಚಿಸಿರುವುದಾಗಿ ರೈತ ಚಂದ್ರ ಮಂದಾರ್ತಿ ಅವರು ದೂರು ನೀಡಿದಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2022 ರ ಅ.11 ರಂದು ಶೋ ರೂಂನಲ್ಲಿ 9.60 ಲಕ್ಷ ರೂಪಾಯಿ ವೆಚ್ಚದ ಟ್ಯಾಕ್ಟರ್ ಖರೀದಿಗೆ ತೆರಳಿದ್ದು, ಆ ವೇಳೆ 2 ಲಕ್ಷ ರೂಪಾಯಿ ನಗದು ರೂಪದಲ್ಲಿ ಸಂಸ್ಥೆಯ ಮುಖ್ಯಸ್ಥ ಶ್ರೀಕಾಂತ್ ಗೆ ಕೊಟ್ಟಿದ್ದು ಉಳಿದ ಮೊತ್ತಕ್ಕೆ ಉಡುಪಿಯ ಎಚ್ ಡಿ ಬಿ ಫೈನಾನ್ಸ್ ನಿಂದ 6.15 ಲಕ್ಷ ರೂಪಾಯಿ ಅದನ್ನು ಈ ಸಂಸ್ಥೆಗೆ ನೀಡಲಾಗಿತ್ತು.

ವಾರದ ನಂತರ ವಿಚಾರಿಸಿದಾಗ ಇನ್ನೊಂದು ವಾರದೊಳಗೆ ಟ್ರ್ಯಾಕ್ಟ್ರರ್ ಬರಲಿದ್ದು ದೂರವಾಣಿ ಕರೆ ಮಾಡಿ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಒಂದು ತಿಂಗಳಾದರೂ ಟ್ರ್ಯಾಕ್ಟರ್ ನೀಡಲಿಲ್ಲ ಯಾಕೆ ಎಂದು ನೋಡಿದಾಗ ಈ ಸಂಸ್ಥೆ ಬಾಗಿಲು ಮುಚ್ಚಿದೆ ಎಂದು ಚಂದ್ರ ಅವರು ದೂರಿನಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!