ಇತರೆ

ಕುಂದಾಪುರ: ಮೆಣಸು ವ್ಯಾಪಾರಿಯ ಕಾರಿನಲ್ಲಿದ್ದ 4.5 ಲಕ್ಷ ರೂ ಕಳವುಗೈದು ಬೈಕಿನಲ್ಲಿ ಪರಾರಿ

Views: 84

ಕುಂದಾಪುರ, : ಒಣ ಮೆಣಸು ವ್ಯಾಪಾರಿಯ ವಾಹನದಿಂದ 4.5 ಲಕ್ಷ ರೂ. ಕಳವುಗೈದು ಬೈಕಿನಲ್ಲಿ  ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಪೇಟೆಯಲ್ಲಿ ನಡೆದಿರುವುದು ವರದಿಯಾಗಿದೆ.

ಹಾವೇರಿ ಮೂಲದ ಮುಹಮ್ಮದ್ ರಫಿ(43) ಹಣ ಕಳೆದುಕೊಂಡ ವ್ಯಾಪಾರಿ. ಇವರು ಬ್ರಹ್ಮಾವರದ ಸಂತೆಯಲ್ಲಿ ಒಣ ಮೆಣಸು ವ್ಯಾಪಾರ ಮುಗಿಸಿ ತನ್ನ ಕೆಲಸದವರೊಂದಿಗೆ ವಾಹನದಲ್ಲಿ ವಾಪಸ್ ಊರಿಗೆ ಹೊರಟಿದ್ದರು. ದಾರಿಮಧ್ಯೆ ರಾತ್ರಿ ಊಟ ಮಾಡುವ ಸಲುವಾಗಿ ಸಿದ್ದಾಪುರ ಪೇಟೆಯಲ್ಲಿನ ಹೊಟೇಲೊಂದರಲ್ಲಿ ಬಳಿ ವಾಹನವನ್ನು ನಿಲ್ಲಿಸಿ ತೆರಳಿದ್ದರು. ಈ ವೇಳೆ ಇಬ್ಬರು ಅಪರಿಚಿತರು ವಾಹನದ ಹಿಂದುಗಡೆ ಇರಿಸಿದ್ದ 4,50,000 ರೂ.ವನ್ನು ಕಳವುಗೈದು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!