ಇತರೆ

ಕುಂದಾಪುರ :ಮೂಡುಗೋಪಾಡಿ ತಾಯಿಯ ಶವದೊಂದಿಗೆ 3 ದಿನಗಳ ಕಾಲ ಕಳೆದಿದ್ದ ಪುತ್ರಿ ಸಾವು

Views: 367

ಕುಂದಾಪುರ : ತಾಲೂಕಿನ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು  ಆ ಮೃತದೇಹದೊಂದಿಗೆ  ಮಗಳು ಅನ್ನ, ನೀರಿಲ್ಲದೆ ಅಸ್ವಸ್ಥಗೊಂಡಿದ್ದ ಪುತ್ರಿ ಪ್ರಗತಿ (32) ಸಾವನ್ನಪ್ಪಿದ್ದಾರೆ.

ಮನೆಯಲ್ಲಿ 3 ದಿನಗಳ ಕಾಲ ತಾಯಿಯ ಮೃತದೇಹದೊಂದಿಗೆ ಅಸ್ವಸ್ಥಗೊಂಡಿದ್ದ ಸ್ಥಿತಿಯಲ್ಲಿ ಮನೆಯ ಅಡುಗೆ ಮನೆಯ ಹತ್ತಿರದ ಶೌಚಾಲಯದಲ್ಲಿ ಬಿದ್ದಿದ್ದ ಪ್ರಗತಿಯನ್ನು ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ಮನೆಯ ಬಾಗಿಲು ಒಡೆದು, ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಾಗಿಸಿತ್ತು. ಅಲ್ಲಿ ಚಿಕಿತ್ಸೆಗೂ ಸ್ಪಂದಿಸುತ್ತಿದ್ದು, ಆದರೆ ಶನಿವಾರ ವಿಪರೀತ ಮಧುಮೇಹ ಉಂಟಾಗಿ, ಹೃದಯಾಘಾತದಿಂದ ಶನಿವಾರ ಸಾವನ್ನಪ್ಪಿದ್ದಾರೆ.

ಈಕೆ  ಬುದ್ಧಿಮಾಂಧ್ಯರಾಗಿದ್ದು, ಇತ್ತೀಚೆಗೆ ಮಧುಮೇಹ ಹೆಚ್ಚಾಗಿದ್ದರಿಂದ ಒಂದು ಕಾಲನ್ನೇ ಕತ್ತರಿಸಿ ನಂತರ ತಾಯಿಯ ಜೊತೆಯಲ್ಲಿಯೇ ಇರುತ್ತಿದ್ದರು.

ತಾಯಿ ಅಂತ್ಯಸಂಸ್ಕಾರ ಮಾಡಿದ ಪಕ್ಕದಲ್ಲಿಯೇ ಮಗಳ ಅಂತ್ಯಸಂಸ್ಕಾರವನ್ನು ಸಂಬಂಧಿಕರು ನೆರವೇರಿಸಿದ್ದಾರೆ.

Related Articles

Back to top button
error: Content is protected !!