ಇತರೆ

ಕುಂದಾಪುರ : ಬೀಜಾಡಿಯಲ್ಲಿ 10 ದಿನಗಳ ಆರಿ ಎಂಬ್ರಾಯ್ಡರಿ ಕೌಶಲ್ಯ ತರಬೇತಿ

Views: 132

ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ.), ಮಂಗಳೂರು ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸಮೃದ್ಧಿ ಸಂಜೀವಿನಿ ಒಕ್ಕೂಟ ಬೀಜಾಡಿ ಇವರ ಆಯೋಜನೆಯಲ್ಲಿ ಬೀಜಾಡಿ ವಿಜಯ ಗಾಣಿಗ ಅವರ ಮನೆಯ ಸಭಾಂಗಣದಲ್ಲಿ 10 ದಿನಗಳ ಕಾಲ ನಡೆಯುವ ಆರಿ ಎಂಬ್ರಾಯ್ಡರಿ ತರಬೇತಿಯ ಉದ್ಘಾಟನೆ ನೆರವೇರಿತು.

ತರಬೇತಿಯ ಉದ್ಘಾಟನೆಯನ್ನು ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ಗಿಡಕ್ಕೆ ನೀರೂಣಿಸುವ ಮೂಲಕ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಬಿವಿಟಿಯ ರಾಘವೇಂದ್ರ ಆಚಾರ್ಯ ಕೆದೂರು, ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ನಾಗರತ್ನ ಜಿ, ಸ್ಥಳಾವಕಾಶ ನೀಡಿದ ವಿಜಯ ಗಾಣಿಗ, ತರಬೇತುದಾರೆ ನಿಶ್ಮಿತಾ ತೆಕ್ಕಟ್ಟೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಸುಜಾತ ಮಮತ , ಚಿತ್ರಕಲಾ ಪ್ರಾರ್ಥಿಸಿ, ಪುಷ್ಷಾ ಸ್ವಾಗತಿಸಿ, ನೇತ್ರಾವತಿ ವಂದಿಸಿ, ಎಲ್ ಸಿ ಆರ್ ಪಿ ನೇತ್ರಾವತಿ ಎಲ್ ನಿರೂಪಿಸಿದರು. ಒಟ್ಟು 30 ಮಂದಿ ಫಲಾನುಭವಿಗಳು ಪಾಲ್ಗೊಂಡಿದ್ದರು. ಎಂಬಿಕೆ ರೇಖಾ ಮತ್ತು ಕೃಷಿ ಸಖಿ ಪುಷ್ಪ ವಿಜಯ ಗ್ರಾಮೀಣ ಪ್ರತಿಷ್ಠಾನದ ಸಿಬ್ಬಂದಿ ಪಂಡರಿನಾಥ್ ಸಹಕರಿಸಿದರು.

Related Articles

Back to top button