ಕಾರ್ಕಳ: ದನ ಕಡಿದು ಅಕ್ರಮವಾಗಿ ಮಾಂಸ ಸಾಗಾಟಕ್ಕೆ ಯತ್ನ,ಮೂವರು ಆರೋಪಿಗಳು ಪರಾರಿ
Views: 96
ಕನ್ನಡ ಕರಾವಳಿ ಸುದ್ದಿ: ದನ ಕಡಿದು ಅಕ್ರಮವಾಗಿ ಮಾಂಸ ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿರುವ ಘಟನೆ ಕಾರ್ಕಳ ನಲ್ಲೂರು ಗ್ರಾಮದ ಕರ್ಮರಕಟ್ಟೆ ಪಡೀಲುಬೆಟ್ಟುವಿನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಇಂದು ಮುಂಜಾನೆ ಸ್ಥಳೀಯರು ನೀಡಿದ ಮಾಹಿತಿಯಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಪಡೀಲುಬೆಟ್ಟುವಿಗೆ ತೆರಳಿ, ಅಶ್ರಫ್ ಎಂಬಾತನಿಗೆ ಸೇರಿದ ತೋಟದಲ್ಲಿ ದನ ಕಡಿದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್. ಹಾಗೂ ಅವರ ತಂಡ ಸ್ಥಳಕ್ಕೆ ಧಾವಿಸಿದ್ದು ಈ ವೇಳೆ ಮಾಂ*ಸ ತುಂಬಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಅಶ್ರಫ್, ನವಾಜ್, ಅಪ್ತಾಬ್ ಪರಾರಿಯಾಗಿದ್ದಾರೆ. ಮನೆ ಪರಿಶೀಲನೆ ಮಾಡುವ ಸಂದರ್ಭ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 60 ಕೆ.ಜಿಯಷ್ಟು ದನದ ಮಾಂಸ ಪತ್ತೆಯಾಗಿದೆ. ವಧೆಗೆಂದು ತಂದಿದ್ದ ಮತ್ತೊಂದು ದನ ತೋಟದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.






