ಕುಂದಾಪುರದಲ್ಲಿ ಓಯಸಿಸ್ ಮುಕ್ತಿ ಬೈಕ್ ರ‍್ಯಾಲಿ ,ಮೆರವಣಿಗೆ, ಬೀದಿ ನಾಟಕ ಪ್ರದರ್ಶನ
Views: 58
ಕನ್ನಡ ಕರಾವಳಿ ಸುದ್ದಿ: ಓಯಸಿಸ್ ಮುಕ್ತಿ ಬೈಕ್ ರ‍್ಯಾಲಿ 2025 ಈ ತಂಡ ಬೆಂಗಳೂರಿನಲ್ಲಿ ಕಾರ್ಯನಿರತರಾಗಿರುವ ಸ್ವಯಂಸೇವಾ ಸಂಸ್ಥೆಯಾಗಿದೆ ಈ ಬೀದಿ ನಾಟಕ ತಂಡ ಬೆಂಗಳೂರಿನಿಂದ ನವೆಂಬರ್ 8ಕ್ಕೆ ಹೊರಟು ಹಾಸನ ಮಾರ್ಗವಾಗಿ ಈ ದಿನ ಕುಂದಾಪುರಕ್ಕೆ ಬಂದಿದ್ದು ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ಬೈಕ್ ರ‍್ಯಾಲಿ, ಮೆರವಣಿಗೆ, ಬೀದಿ ನಾಟಕ ಪ್ರದರ್ಶನಗೊಂಡಿತು.
ಈ ತಂಡದಲ್ಲಿ ಓಯಾಸಿಸ್ ಇಂಡಿಯಾ ಸ್ವಯಂಸೇವಾ ಸಂಸ್ಥೆಯ ಪದಾಧಿಕಾರಿಗಳು ಬೈಕ್ ರ‍್ಯಾಲಿ ಮೂಲಕ ಹಾಗೂ ಬೀದಿ ನಾಟಕ ಪ್ರದರ್ಶನ ಗೊಂಡಿದೆ ಈ ನಾಟಕ ಇಂದು ಸಂಜೆ 4:30ಕ್ಕೆ ಪ್ರದರ್ಶನಗೊಂಡಿತು ತಂಡ ಮೆರವಣಿಗೆಯೊಂದಿಗೆ ಪ್ರಚಾರ ಕೈಗೊಂಡು ಕೊನೆಯಲ್ಲಿ ನಾಟಕ ಪ್ರದರ್ಶನವನ್ನು ನಡೆಸಲಾಯಿತು.
ಕಾರ್ಯಕ್ರಮದ ಸಹಾಯಕ ಪಡಿ ಸಂಸ್ಥೆ ಮಂಗಳೂರು, SDMC ಸಮನ್ವಯ ಕೇಂದ್ರ ವೇದಿಕೆ ಕುಂದಾಪುರ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಕುಂದಾಪುರ, ನಮ್ಮ ಪ್ರಗತಿ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಕಾಳಾವರ, ಜಿಲ್ಲಾ ಪೊಲೀಸ್ ಇಲಾಖೆ ಉಡುಪಿ, ಆದಿ ದ್ರಾವಿಡ ಸೇವಾ ಸಮಿತಿ ಕಾಳಾವರ ಈ ಎಲ್ಲರ ಸಹಕಾರದಿಂದ ಇವತ್ತಿನ ಕಾರ್ಯಕ್ರಮ ನಡೆಯಿತು ಕೊನೆಯಲ್ಲಿ ಅಬ್ದುಲ್ ಸಲಾಂ ಚಿತ್ತೂರು ಧನ್ಯವಾದ ಸಮರ್ಪಣೆ ಮಾಡಿದರು.
ಸಹಯೋಗ: ಪಡಿ ಸಂಸ್ಥೆ ಮಂಗಳೂರು, SDMC ಸಮನ್ವಯ ಕೇಂದ್ರ ವೇದಿಕೆ ಕುಂದಾಪುರ, ನಮ್ಮ ಪ್ರಗತಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಕಾಳಾವರ, ಇಲ್ಲಾ ಪೊಲೀಸ್ ಇಲಾಖೆ, ಆಡಿದ್ರಾವಿದ ಸೇವಾ ಸಮಿತಿ ಕಾಳಾವರ, ಶಿಕ್ಷಣ ಸಂಪನ್ಮೂಲ ಕೇಂದ್ರ ಕುಂದಾಪುರ









