ಕುಂದಾಪುರ :ಕೋಟೇಶ್ವರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಶವ ಬೀಚ್‌ನಲ್ಲಿ ಪತ್ತೆ, ಆತ್ಮಹತ್ಯೆಯೋ..ಆಕಸ್ಮಿಕವೋ..!?

Views: 267
ಕುಂದಾಪುರ: ಇಲ್ಲಿಗೆ ಸಮೀಪ ಕೋಟೇಶ್ವರದ ಖಾಸಗಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಯಮುನರಾಜ್ (22) ಅವರ ಮೃತದೇಹ ಮೇ 4ರಂದು ಕೋಡಿಯ ಸೀವಾಕ್ ಬಳಿ ಪತ್ತೆಯಾಗಿದೆ.
ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಆಂತರಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಕೆಲವು ದಿನಗಳಿಂದ ಯಾರು ಹತ್ತಿರವು ಮಾತನಾಡದೇ ಮಂಕಾಗಿದ್ದ ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಆತನ ಸ್ನೇಹಿತರಿಂದ ತಿಳಿದುಬಂದಿದೆ
ಘಟನೆ ವಿವರ :ಬೆಂಗಳೂರು ನೆಲಮಂಗಲ ಮೂಲದ ಪ್ರಕಾಶ್ ಜಿ. ಅವರ ಪುತ್ರ ಯಮುನರಾಜ್ ಕೋಟೇಶ್ವರದ ಆಯುರ್ವೇದ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಂಎಸ್ ವ್ಯಾಸಂಗ ಮಾಡುತ್ತಿದ್ದು, ಕೋಟೇಶ್ವರದ ಪಿಜಿಯೊಂದರಲ್ಲಿ ನೆಲೆಸಿದ್ದರು. ಮೇ 2ರ ಸಂಜೆ 4 ಗಂಟೆಗೆ ಪಿಜಿಯಿಂದ ಹೊರಟಿದ್ದು, ಮೊಬೈಲ್ ಅನ್ನು ರೂಮ್‌ನಲ್ಲಿಯೇ ಬಿಟ್ಟು ಹೋಗಿದ್ದ.
ಕುಂದಾಪುರ ಕೋಡಿ ಸೀವಾಕ್ ಬಳಿಯ ದೋಣಿಯಲ್ಲಿ ಮೇ 3ರ ಸಂಜೆ 5 ಗಂಟೆಯ ಸುಮಾರಿಗೆ ಮೀನುಗಾರಿಕೆ ಮಾಡುತ್ತಿದ್ದ ಗುರುರಾಜ್ ಅವರಿಗೆ ಸಮುದ್ರದ ನೀರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ತೇಲುತ್ತಿದ್ದದ್ದು ಕಂಡು ಬಂದಿದೆ ಆ ಬಳಿಕ ಆ ಮೃತದೇಹವನ್ನು ದೋಣಿಯಲ್ಲಿ ಹಾಕಿಕೊಂಡು ದಡಕ್ಕೆ ತಂದಿದ್ದರು.ಇಲ್ಲಿಯೇ ಹತ್ತಿರದ ಸೀವಾಕ್ ಬಳಿ ಸೈಕಲ್‌ವೊಂದು ಪತ್ತೆಯಾಗಿದ್ದು, ಅದರೊಂದಿಗೆ ದಾಖಲೆಗಳ ಮೂಲಕ ಪತ್ತೆ ಹಚ್ಚಲಾಯಿತು.
ವೈದ್ಯೆಯಾಗಿರುವ ತನ್ನ ಅಕ್ಕನಿಗೆ ಯಮುನರಾಜ್ ಪ್ರತಿದಿನ ಕರೆ ಮಾಡಿ ಮಾತಾಡುತ್ತಿದ್ದರು.ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷೆ ನಡೆಯಲಿದ್ದು ಅದಕ್ಕೆ ತಯಾರಾಗುತ್ತಿದ್ದೇನೆ ಎಂದಿದ್ದರು.ಆದರೆ ಮೇ 2ರ ರಾತ್ರಿ ಕರೆ ಮಾಡಿರಲಿಲ್ಲ, ಕಲಿಕೆಯಲ್ಲಿ ಮುಂದಿರುವ ಈತನ ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಮೃತ ವಿದ್ಯಾರ್ಥಿಯ ಪೋಷಕರು ಬೆಂಗಳೂರಿನಿಂದ ಆಗಮಿಸಿದ್ದು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಆಗಮಿಸಿ ಮೃತದೇಹವನ್ನು ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ನಂದಕುಮಾರ್, ಹೆಡ್‌ಕಾನ್‌ಸ್ಟೆಬಲ್ ರಾಘವೇಂದ್ರ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲಿಸಿದರು. ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.






