ಯುವಜನ
ಕುಂದಾಪುರ: ಕಾವ್ರಾಡಿಯಲ್ಲಿ ವರ್ಕ್ ಫ್ರಂ ಹೋಮ್ ಉದ್ಯೋಗಿ ಬಾವಿಯ ರಾಟೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆ

Views: 179
ಕುಂದಾಪುರ: ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು, ವರ್ಕ್ ಫ್ರಂ ಹೋಮ್ ಆಗಿ ಕೆಲಸ ಮಾಡಿಕೊಂಡಿದ್ದ ಬಸ್ರೂರು ಸಮೀಪ ಕಾವ್ರಾಡಿ ಎಂಬಲ್ಲಿನ ನಿವಾಸಿ ಸದಾಶಿವ (33) ಅವರು ಮನೆಯ ಬಾವಿಯ ರಾಟೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಮೇ 16ರ ರಾತ್ರಿ 9.30ಕ್ಕೆ ಎಲ್ಲರೂ ಊಟ ಮಾಡಿ ಮಲಗಿದ್ದು, ಬೆಳಿಗ್ಗೆ ಸದಾಶಿವ ಅವರ ಪತ್ನಿ ಸುಪ್ರೀತಾ ಅವರು ಮನೆಯ ಬಾಗಿಲು ತೆಗೆದು ನೋಡಿದಾಗ ಎದುರಿನ ಬಾವಿಯ ದಂಡೆಯಲ್ಲಿ ಟಾರ್ಚ್‌ಲೈಟ್ ಪತ್ತೆಯಾಗಿತ್ತು.ಹತ್ತಿರ ಹೋಗಿ ಪರಿಶೀಲಿಸಿದಾಗ ಪತಿ ಸದಾಶಿವ ಅವರ ಮೃತದೇಹ ಬಾವಿಯ ರಾಟೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೆಲಸದ ಒತ್ತಡವೋ, ಇನ್ಯಾವುದೋ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ.
ಸದಾಶಿವ ಅವರ ಸಹೋದರ ರಾಘವೇಂದ್ರ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






