ಶಿಕ್ಷಣ

ಕುಂದಾಪುರ: ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿ ನಾಪತ್ತೆ 

Views: 329

ಕನ್ನಡ ಕರಾವಳಿ ಸುದ್ದಿ: ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಮ್ಮಾಡಿ ಸಂತೋಷನಗರದ ವಿದ್ಯಾರ್ಥಿ ನಮೇಶ್ ಎಂಬಾತ ಸೆ.18ರಂದು  ಬೆಳಿಗ್ಗೆ ಕಾಲೇಜಿಗೆ ತೆರಳಿದ್ದು ಸಂಜೆ ನಾಲ್ಕು ಗಂಟೆಯವರೆಗೂ ಕಾಲೇಜಿನಲ್ಲಿದ್ದು, ನಂತರ ಸಂಜೆಯಾದರೂ ಮನೆಗೆ ಬರದೆ ನಾಪತ್ತೆಯಾಗಿದ್ದಾನೆ. ಕುಂದಾಪುರ ಪೊಲೀಸ್ ಸ್ಟೇಷನ್ ನಲ್ಲಿ ನಾಪತ್ತೆ ದೂರು ದಾಖಲಾಗಿದೆ.

ಆತನಿಗಾಗಿ ಹುಡುಕಾಟ ಮಾಡಿದಾಗ ಇಂದು ಬೆಳಗ್ಗಿನ ಜಾವ 3 ಗಂಟೆಗೆ ಆತನ ಬೈಕ್ ಕನ್ನಡ ಕುದ್ರು ಸಮೀಪ ಪತ್ತೆಯಾಗಿದೆ. ದಯವಿಟ್ಟು ಎಲ್ಲಿಯಾದರೂ ಈ ವಿದ್ಯಾರ್ಥಿ ಕಂಡು ಬಂದಲ್ಲಿ 9945087078 ಈ ನಂಬರಿಗೆ ಸಂಪರ್ಕಿಸುವಂತೆ ಕೋರಲಾಗಿದೆ.

Related Articles

Back to top button
error: Content is protected !!