ಇತರೆ

ಕುಂದಾಪುರ: ಅರಾಟೆ ಸೇತುವೆ ಮೇಲೆ ಸಿಡಿಲು ಬಡಿದು ಕಾರ್ಮಿಕ ಸಾವು 

Views: 116

ಕನ್ನಡ ಕರಾವಳಿ ಸುದ್ದಿ: ಗುರುವಾರ ಸಂಜೆ ಸಿಡಿಲು ಬಡಿದು ಹೆದ್ದಾರಿ ಕಾಮಗಾರಿ ನಿರತ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ತ್ರಾಸಿ ಸಮೀಪದ ಮುಳ್ಳಿಕಟ್ಟೆಯ ಅರಾಟೆ ಸೇತುವೆಯ ಮೇಲೆ  ಸಂಭವಿಸಿದೆ.

ಪಂಜಾಬ್ ಮೂಲದ ಐ.ಆರ್.ಬಿ ಕಂಪೆನಿಯ ಅಶುತೋಷ್ (35) ಸಾವನ್ನಪ್ಪಿದವರು. ಜೊತೆಗಿದ್ದ ಲವಜೋತ್ ಸಿಂಗ್  ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇವರು ಹೆದ್ದಾರಿ ಕಾಮಗಾರಿ ನಿರ್ವಹಿಸುವ ಐಆರ್‌ಬಿಯ ಕಾರ್ಮಿಕರಾಗಿದ್ದು, ಕುಂದಾಪುರ – ಬೈಂದೂರು ರಾ.ಹೆ.ಯ ಅರಾಟೆ ಸೇತುವೆ ಬಳಿ ಕೆಲಸ ಮಾಡುತ್ತಿದ್ದರು. ಸಂಜೆ ವೇಳೆ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ತೀವ್ರ ಗಾಯಗೊಂಡ ಅಶುತೋಷ್ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆತಂದರೂ ಅಷ್ಟರೊಳಗೆ ಸಾವನ್ನಪ್ಪಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಗಂಗೊಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button
error: Content is protected !!