ಇತರೆ
ಕುಂದಾಪುರ: ಅರಾಟೆ ಬೋಟು ನಿರ್ಮಾಣ ಘಟಕದಲ್ಲಿ ಆಕಸ್ಮಿಕ ಬೆಂಕಿ, ಲಕ್ಷಾಂತರ ರೂ.ನಷ್ಟ
Views: 55
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಅರಾಟೆಯ ಸೇತುವೆ ಬಳಿ ಬೋಟುಗಳ ನಿರ್ಮಾಣ ಘಟಕದಲ್ಲಿ ಬುಧವಾರ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ಅಂದಾಜು 5 ಲಕ್ಷ ರೂ. ನಷ್ಟ ಉಂಟಾಗಿದೆ.
ಪ್ರಕಾಶ್ ಆಚಾರ್ ಅವರ ಮಾಲಕತ್ವದ ಬೋಟುಗಳ ನಿರ್ಮಾಣ ಘಟಕದಲ್ಲಿ ಬುಧವಾರ ಮಧ್ಯಾಹ್ನದ ಸುಮಾರಿಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ಬೋಟಿನ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಕಾಣಿಸಿಕೊಂಡ ಬೆಂಕಿಯು ಫೈವುಡ್ ಗೆ ತಗುಲಿ, ಬೋಟಿಗೆ ವ್ಯಾಪಿಸಿತು. ಕೂಡಲೇ ಕುಂದಾಪುರದ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದು, ಅವರು ಕಾರ್ಯಾಚರಣೆ ನಡೆಸಿ, ನಿಯಂತ್ರಣಕ್ಕೆ ತಂದಿದ್ದರಿಂದ ಇನ್ನಷ್ಟು ಬೋಟುಗಳಿಗೆ ಬೆಂಕಿ ತಗುಲುವುದು ತಪ್ಪಿದಂತಾಗಿದೆ.ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿ ಶಾಮಕ ದಳದವರು ಅವರೊಂದಿಗೆ ಸ್ಥಳೀಯರು, ಘಟಕದ ಕೆಲಸಗಾರರು ಸಹಕರಿಸಿದರು.






