ಇತರೆ
ಕುಂದಾಪುರ:ಹೊಸೂರು ಹೆದ್ದಾರಿ ಮನೆ ಚಪ್ರಮಕ್ಕಿ ಅರವಿಂದನಾಥ ಶೆಟ್ಟಿ ನಿಧನ
Views: 510
ಕನ್ನಡ ಕರಾವಳಿ ಸುದ್ದಿ: ಹೊಸೂರು ಹೆದ್ದಾರಿ ಮನೆ ಚಪ್ರಮಕ್ಕಿ ಅರವಿಂದನಾಥ ಶೆಟ್ಟಿ(73)ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಫೆ.9ರಂದು ನಿಧನರಾದರು
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅರವಿಂದನಾಥ ಶೆಟ್ಟಿ ಅವರು ವಂಡ್ಸೆ ಚಿತ್ತೂರು ಇಡೂರು ಹೊಸೂರು ಕೆರಾಡಿ ಭಾಗದಲ್ಲಿ ಜನಾನುರಾಗಿಯಾಗಿದ್ದು, ಹೊಸೂರು ಮಹಿಷ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದು ದೇವಸ್ಥಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.






