ಇತರೆ

ಕುಂದಾಪುರ:ವಡೇರಹೊಬಳಿಯಲ್ಲಿ ಪಂಪ್ ರಿಪೇರಿ ಮಾಡಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವು 

Views: 193

ಕನ್ನಡ ಕರಾವಳಿ ಸುದ್ದಿ:  ಕುಂದಾಫುರದ ವಡೇರಹೊಬಳಿಯಲ್ಲಿ ಪಂಪ್ ರಿಪೇರಿ ಮಾಡಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

 ಹಂಗಳೂರು ಗ್ರಾಮದ ನಾಗರಾಜ (51) ಮೃತಪಟ್ಟವರು.

ದಿನಾಂಕ 30/01/2026 ರಂದು ಬೆಳಿಗ್ಗೆ ಸುಮಾರು 11:30 ಗಂಟೆಗೆ ಮನೆಯ ಬಾವಿಯೊಳಗಿನ ಸಬ್ ಮರಸಿಬಲ್ ಪಂಪ್ ಅನ್ನು ರಿಪೇರಿ ಮಾಡಲು ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button
error: Content is protected !!