ಇತರೆ

ಕುಂದಾಪುರ:ವಂಡ್ಸೆ ಸೇತುವೆ ಬಳಿ ನದಿಗೆ ಹಾರಿ ಆತ್ಮಹತ್ಯೆ 

Views: 277

ಕನ್ನಡ ಕರಾವಳಿ ಸುದ್ದಿ: ಕೌಟುಂಬಿಕ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ  ವಂಡ್ಸೆ ಎಂಬಲ್ಲಿ ನಡೆದಿದೆ.

ನಾಡ ಗ್ರಾಮದ ನಿವಾಸಿ ಸೂಲ್ಯಣ್ಣ ಶೆಟ್ಟಿ ಅವರ ಪುತ್ರ ಸುಧಾಕರ ಶೆಟ್ಟಿ ಗುರುವಾರ ಸಂಜೆ ವಂಡ್ಸೆ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂಬೈನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ಈತ ವರ್ಷದ ಹಿಂದೆ ಊರಿಗೆ ಬಂದಿದ್ದರು. ಹೆಂಡತಿ ಮನೆಯಾದ ವಂಡ್ಸೆಯಲ್ಲಿ ನೆಲೆಸಿದ್ದರು. ಗುರುವಾರ ಸಂಜೆ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ನನ್ನ ಬಾವ ನಾಗರಾಜ ಮತ್ತು ಹೆಂಡತಿ ಗುಣರತ್ನ ತೊಂದರೆ ನೀಡುತ್ತಿದ್ದು, ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದುಕೊಂಡಿದ್ದು ನಂತರ ಬೈಕ್ನಲ್ಲಿ ವಂಡ್ರೆ ಸೇತುವೆ ಬಳಿ ಹೋಗಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

Back to top button
error: Content is protected !!