ಕುಂದಾಪುರ:ಮೂಡು ಗೋಪಾಡಿಯ ಮನೆಯೊಳಗೆ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Views: 235
ಕುಂದಾಪುರ: ತಾಲೂಕಿನ ಗೋಪಾಡಿ ಗ್ರಾಮದ ಮೂಡು ಗೋಪಾಡಿ ಎಂಬಲ್ಲಿ ಮಹಿಳೆಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯೊಳಗಿನ ಶೌಚಾಲಯದ ಬಳಿ ಪತ್ತೆಯಾಗಿದೆ.
ಮೂಡು ಗೋಪಾಡಿಯ ಅರಸರ ಬೆಟ್ಟು ಇಲ್ಲಿನ ನಿವಾಸಿ ಜಯಂತಿ ಶೆಟ್ಟಿ (61) ಎಂದು ತಿಳಿದು ಬಂದಿದೆ.
ಜಯಂತಿ ಅವರು ಅಸ್ವಸ್ಥತೆಯಿಂದ ಬಳಲುತ್ತಿದ್ದು, ಪುತ್ರಿ ಪ್ರಗತಿ ಅವರೊಂದಿಗೆ ವಾಸಿಸುತ್ತಿದ್ದರು.ಕಳೆದ 3-4 ದಿನಗಳಿಂದ ಜಯಂತಿ ಅವರ ಮನೆಯಿಂದ ವಿಪರೀತ ವಾಸನೆ ಬರುತ್ತಿರುವುದಾಗಿ ಸಹೋದರ ಜಯಕುಮಾರ್ ಅವರಿಗೆ ಸ್ಥಳೀಯರು ತಿಳಿಸಿದ್ದರು. ಅದರಂತೆ ಅವರು ಮನೆಗೆ ಭೇಟಿ ನೀಡಿದಾಗ ಜಯಂತಿ ಅವರ ಮೃತದೇಹವು ಮನೆಯ ಒಳಗಿನ ಶೌಚಾಲಯದ ಬಳಿ ಕೊಳೆತ ಸ್ಥಿತಿಯಲ್ಲಿತ್ತು.ಮನೆಯ ಅಡುಗೆ ಕೋಣೆಯಲ್ಲಿ ಅಸ್ವಸ್ಥತೆಯಿಂದ ಮಲಗಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.ಜಯಂತಿ ಅನಾರೋಗ್ಯದಿಂದ 3-4 ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.ಸಹೋದರ ಜಯಕುಮಾರ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಘಟನಾ ಸ್ಥಳಕ್ಕೆ ಕುಂದಾಪುರ ಎಸ್‌ಐ ವಿನಯ್ ಎಸ್. ಕೊರ್ಲಹಳ್ಳಿ ಹಾಗೂ ಪೊಲೀಸ್ ಸಿಬಂದಿ ಭೇಟಿ ನೀಡಿದ್ದಾರೆ.






