ಕುಂದಾಪುರ:ಪತ್ನಿಯಿಂದಲೇ ಪತಿಯ ಮೇಲೆ ಹಲ್ಲೆ, ಜೀವ ಬೆದರಿಕೆ!
Views: 232
ಕನ್ನಡ ಕರಾವಳಿ ಸುದ್ದಿ:ಮಗುವನ್ನು ನೋಡಬೇಕೆಂದು ಕರೆಸಿಕೊಂಡು ಪತ್ನಿ ಮತ್ತು ಆಕೆಯೊಂದಿಗೆ ಬಂದಿದ್ದ ನಾಲ್ಕೈದು ಮಂದಿ ಹಲ್ಲೆಗೈದು, ಜೀವ ಬೆದರಿಕೆ ಹಾಕಿರುವುದಾಗಿ ಪತಿ ದೂರು ನೀಡಿದ್ದಾರೆ.
ತೆಕ್ಕಟ್ಟೆ ಗ್ರಾಮದ ಅಬ್ದುಲ್ ಲತೀಫ್ ಮೊಹಿದ್ದೀನ್ ಹಾಗೂ ಪತ್ನಿ ರೂಹಿ ಶಮಾ ನಡುವೆ ವೈಮನಸ್ಸು ಉಂಟಾಗಿ ಪ್ರತ್ಯೇಕವಾಗಿದ್ದು, 2014 ರಂದು ಅವರ ಮದುವೆಯಾಗಿದ್ದು, ಅಬುಧಾಬಿಯಲ್ಲಿ ನೆಲೆಸಿದ್ದರು.7 ವರ್ಷದ ಪುತ್ರಿಯಿದ್ದಾಳೆ. 3 ವರ್ಷದಿಂದ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಅಲ್ಲಿಯೇ ಪ್ರತ್ಯೇಕವಾಗಿ ನೆಲೆಸಿದ್ದಾರೆ. ಡಿ. 2ರಂದು ಲತೀಫ್ ಮಗಳೊಂದಿಗೆ ಊರಿಗೆ ಬಂದಿದ್ದರು. ಡಿ. 7ರಂದು ರೂಹಿ ಶಮಾ ಕೂಡ ಊರಿಗೆ ಬಂದು ತಾಯಿ ಮನೆಗೆ ತೆರಳಿದ್ದರು. ಮಗಳನ್ನು ನೋಡಬೇಕೆಂದು ಪತ್ನಿ ಕರೆ ಮಾಡಿದ ಕಾರಣ ಡಿ. 10ರ ರಾತ್ರಿ 10.30ಕ್ಕೆ ಲತೀಫ್ ಕರೆದುಕೊಂಡು ಅವರು ಮಗಳನ್ನು ಅಣ್ಣ ಹಾಗೂ ಮನೆಯವರೊಂದಿಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಗೆ ಬಂದರು. ಆಗ ರೂಹಿ ಶಮಾ, ರಿಯಾಸುದ್ದೀನ್ ,ಸುಹೇಲ್ ಅಹಮ್ಮದ್, ಸರ್ಫರಾಜ್ ಮಹಮ್ಮದ್ ತನೂಫ್ ಹಾಗೂ ಸೌಹಾನ್ ಮಗಳನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದರು ಹಾಗೂ ನನ್ನ ಮೇಲೆ ಅವರೆಲ್ಲ ಬಂದು ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.






