ಕುಂದಾಪುರದ ಸಮಗ್ರ ಅಭಿವೃದ್ಧಿಯ ನಿರೀಕ್ಷೆಯಲ್ಲಿ ಮತದಾರರು…..

Views: 0
ಕುಂದಾಪುರ : 1957 ರಿಂದ ಇಲ್ಲಿಯವರೆಗೆ ಸಾವ೯ತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು ಯಾರು ಸಚಿವರಾಗಿಲ್ಲ. ಪ್ರಥಮವಾಗಿ ಸಮಾಜವಾದಿ ಪಕ್ಷದಿಂದ ವಿಧಾನ ಸಭೆಗೆ ಆಯ್ಕೆಯಾದ ವಕ್ವಾಡಿ ಶ್ರೀನಿವಾಸ ಶೆಟ್ಟಿ ಅವರು ವಿರೋದ ಪಕ್ಷದ ನಾಯಕ ರಾಗಿದ್ದಾರೆ. ಕಾಂಗ್ರೆಸ್ ನಿಂದ ಪ್ರತಾಪ ಚಂದ್ರಶೆಟ್ಟಿ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಸಭಾಪತಿಯಾಗಿದ್ದರು. ಕುಂದಾಪುರ ಮತ್ತು ಉಡುಪಿ ಕ್ಷೇತ್ರಕ್ಕೆ ವಿಲೀನ ವಾಗಿರುವ ಬ್ರಹ್ಮಾವರ ಕ್ಷೇತ್ರದಲ್ಲಿ ಕುಂದಾಪುರದ ಜಯಪ್ರಕಾಶ ಹೆಗ್ಡೆ ಸಚಿವರಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಪ್ರತಿನಿಧಿಸಿದ ವಿಧಾನ ಪರಿಷತ್ ಗೆ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿದ್ದಾರೆ. ಆದರೆ ಕುಂದಾಪುರದ 71ವಷ೯ಗಳ ಇತಿಹಾಸದಲ್ಲಿ ಇಲ್ಲಿಯವರೆಗೆ ವಿಧಾನ ಸಭೆಗೆ ಆಯ್ಕೆಯಾದವರಿಗೆ ಸಚಿವ ಸ್ಥಾನದ ಬಾಗ್ಯ ಬರಲಿಲ್ಲ,
ಕುಂದಾಪುರದ ಸಮಗ್ರ ಅಭಿವೃದ್ಧಿಗಾಗಿ ಹಿನ್ನಡೆಯಾಗಿರುವ ವಾರಾಹಿ ಯೋಜನೆ, ಬೆಳೆಯುತ್ತಿರುವ ಕುಂದಾಪುರಕ್ಕೆ ನಗರ ಯೋಜನೆ, ಸರಕಾರಿ ಮೆಡಿಕಲ್ ಕಾಲೇಜು, ಉದ್ಯೋಗ ಅವಕಾಶಕ್ಕಾಗಿ ದೊಡ್ಡ ಕಂಪೆನಿಗಳು, ಪ್ರಾಕೃತಿಕ ಸೌಂದಯ೯ ಹೊಂದಿರುವ ಕುಂದಾಪುರವನ್ನು ಟೂರಿಸಂಗೆ ಬೆಳವಣಿಗೆಗೆ ಪ್ರೋತ್ಸಾಹ ಅತ್ಯಗತ್ಯದ ನಿರೀಕ್ಷೆಯಲ್ಲದ್ದಾರೆ. ಕುಂದಾಪುರದ ಅಭಿವೃದ್ಧಿಗಾಗಿ ಸಚಿವ ಸ್ಥಾನದ ಕನಸು ಈ ಭಾರಿಯಾದರೂ ಕನಸು ನನಸಾಗುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.






