ಶಿಕ್ಷಣ
ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು: ‘ಹದಿಹರೆಯದ ಸಮಸ್ಯೆಗಳು ಮತ್ತು ಎಚ್.ಐ.ವಿ’ ಬಗ್ಗೆ ಉಪನ್ಯಾಸ

Views: 498
ಕುಂದಾಪುರ:ಹದಿಹರೆಯದ ಮಕ್ಕಳಲ್ಲಿ ಸಹಜವಾಗಿರುವಂಥ ಕೆಲವು ವರ್ತನೆ ಮತ್ತು ನಡತೆಗಳೇ ನಿಯಂತ್ರಣವಿಲ್ಲದೇ ಅತಿರೇಕಕ್ಕೇರಿದರೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಎಚ್.ಐ.ವಿ ಪಾಸಿಟಿವ್ ಬಗ್ಗೆ ಯುವಜನತೆ ಹೆಚ್ಚಿನ ಅರಿವು ಪಡೆದು ಜೀವನದಲ್ಲಿ ಮುನ್ನಡೆಯುವ ಅಗತ್ಯವಿದೆ ಎಂದು ಕುಂದಾಪುರದ ಸರಕಾರಿ ಆಸ್ಪತ್ರೆಯ ಆಪ್ತಸಮಾಲೋಚಕರಾದ ಶ್ರೀಮತಿ ನಳಿನಾಕ್ಷಿ ಇವರು ತಿಳಿಸಿದರು
ಅವರು ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಹದಿಹರೆಯದ ಸಮಸ್ಯೆಗಳು ಮತ್ತು ಎಚ್.ಐ.ವಿ’ ಬಗ್ಗೆ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






