ಶಿಕ್ಷಣ

ಕುಂದಾಪುರದ ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ‌ C.A/ C.S ಓರಿಯಂಟೇಶನ್

Views: 92

ಕನ್ನಡ ಕರಾವಳಿ ಸುದ್ದಿ: ನಮ್ಮ ಗುರಿಯಲ್ಲಿ ಸ್ಪಷ್ಟತೆ, ಅದನ್ನು ಕಾರ್ಯಪ್ರವೃತ್ತವಾಗಿಸುವ ಆತ್ಮವಿಶ್ವಾಸ ಮತ್ತು ಹಂತ ಹಂತದ ಪರೀಕ್ಷೆಗಳಲ್ಲಿ‌‌ ಯಶಸ್ಸು ಸಿಕ್ಕಿದಾಗ ಮುಂದಿನ ತಯಾರಿ- ಇಂಥ ಸರಳ ಗುಣಗಳನ್ನು ಕಲಿತರೆ C.A/ C.S ಸಂಬಂಧಿತ ಕೋರ್ಸ್ಗಳನ್ನು ಮಾಡಲು‌ ಸುಲಭವಾಗುತ್ತದೆ ಎಂದು ಉಡುಪಿಯ ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ತರಬೇತುದಾರರಾದ ಪ್ರೊ. ಅಲ್ಬನ್ ರವರು ಕುಂದಾಪುರದ‌ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಅಯೋಜಿಸಿದ C.A/ C.S ಓರಿಯಂಟೇಶನ್ ಕಾರ್ಯಕ್ರಮದಲ್ಲಿ ತಿಳಿಸಿದರು. ತ್ರಿಷಾ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಯಾದ ಜಯದೀಪ್ ಪ್ರಭಾಕರ್ ಅಮೀನ್ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಾಣಿಜ್ಯಶಾಸ್ತ್ರ ಉಪನ್ಯಾಸಕಿ ದೀಪಾ ಶೆಟ್ಟಿಯವರು ಧನ್ಯವಾದ ಸಲ್ಲಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ ಶೆಣೈ‌ ಕಾರ್ಯಕ್ರಮ ನಿರ್ವಹಿಸಿದರು. 

Related Articles

Back to top button