ಯುವಜನ

ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಉಪ್ಪಿನಕುದ್ರು ಯುವತಿ ನಾಪತ್ತೆ 

Views: 1262

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಉಪ್ಪಿನಕುದ್ರು ರಥಬೀದಿಯ ಬಾಸ್ಕ‌ರ್ ಆಚಾರ್ಯ ಇವರ ಮಗಳು 18 ವರ್ಷದ ಯುವತಿ ಪಲ್ಲವಿ ದಿನಾಂಕ:13-07-2026 ರಂದು ಬೆಳಿಗ್ಗೆ 10:00 ಗಂಟೆಗೆ ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಮನೆಗೆ ಬಂದಿರುವುದಿಲ್ಲ. ಮನೆಯವರು ಅವರ ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಗದೇ ಇದ್ದ ಕಾರಣ ದೂರು ನೀಡಲು ವಿಳಂಬವಾಗಿರುತ್ತದೆ. ಆದ್ದರಿಂದ ಕಾಣೆಯಾದ ಪಲ್ಲವಿ ಅವರನ್ನು ಪತ್ತೆ ಮಾಡಿಕೋಡಬೇಕಾಗಿ ವಿನಂತಿಸಲಾಗಿದೆ.ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿಯ ಎತ್ತರ 5.92,ಗೋಧಿ ಮ್ಮೆಬಣ್ಣ, ಕಪ್ಪು ಜೀನ್ಸ್, ಬಿಳಿ ಬಣ್ಣದ ಟಿ ಶರ್ಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ,
ಯುವತಿ  ಪತ್ತೆಯಾದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
ಕುಂದಾಪುರ ಪೊಲೀಸ್ ಠಾಣೆ: 08254-230338
ಡಿ.ವೈ.ಎಸ್.ಪಿ ಕುಂದಾಪುರ ವಿಭಾಗ:9480805422
ಪಿ.ಐ ಕುಂದಾಪುರ ಠಾಣೆ : 9480805455
ಪಿ.ಎಸ್. ಐ ಕುಂದಾಪುರ ಠಾಣೆ :8277988957
ಪಿ.ಎಸ್. ಐ ಕುಂದಾಪುರ ಠಾಣೆ:8277988959

Related Articles

Back to top button
error: Content is protected !!