ಶಿಕ್ಷಣ

ಕಾಳಾವರ ಶಾಲೆ: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ವೆಂಕಟರವರಿಗೆ ಅಭಿನಂದನೆ

"ಅರ್ಜಿ ಸಲ್ಲಿಸದೆ ಅತ್ಯುತ್ತಮ ಸೇವಾ ಕಾರ್ಯಕ್ಕಾಗಿ ಅರ್ಹವಾಗಿಯೇ ಬರುವ ಪ್ರಶಸ್ತಿಗಳಿಗೆ ಹೆಚ್ಚು ಮೌಲ್ಯವಿರುತ್ತದೆ"---ಕಿರಣ್ ಕುಮಾರ್ ಕೊಡ್ಗಿ, ಶಾಸಕರು. ಕುಂದಾಪುರ.

Views: 384

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಾಳಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರಾದ ವೆಂಕಟ ಮತ್ತು ಅವರ ಧರ್ಮಪತ್ನಿ ದೀಪಾ ಅವರನ್ನು ಸನ್ಮಾನಿಸಲಾಯಿತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ  ಅವರು ಸನ್ಮಾನಿಸಿ ಮಾತನಾಡಿ, ಅರ್ಜಿ ಸಲ್ಲಿಸದೆ ಬರುವ ಪ್ರಶಸ್ತಿಗಳಿಗೆ ಹೆಚ್ಚು ಮೌಲ್ಯವಿರುತ್ತದೆ ಅಂತಹ ಶಿಕ್ಷಕರನ್ನು ಗೌರವಿಸಲು ತುಂಬಾ ಸಂತೋಷವಾಗುತ್ತದೆ. ಅತ್ಯುತ್ತಮ ಸೇವಾ ಕಾರ್ಯಕ್ಕಾಗಿ ಅರ್ಹವಾಗಿಯೇ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಹೆಮ್ಮೆ ತಂದಿದೆ. ಈ ಶಾಲೆಗೆ ಊರಿನವರ ಸಹಕಾರ ಕಂಡು ತುಂಬಾ ಸಂತೋಷವಾಯಿತು ಎಂದರು.ಊರಿನವರ ಪ್ರೋತ್ಸಾಹ ಇದೇ ರೀತಿ ಮುಂದುವರಿದರೆ ಈ ಶಾಲೆ ಇನ್ನೂ ನೂರು ವರ್ಷಗಳ ಕಾಲ ಯಶಸ್ವಿಯಾಗಿ ಅಭಿವೃದ್ಧಿ ಹೊಂದುತ್ತದೆ ಎಂದರು. ಇದೇ ಸಂದರ್ಭದಲ್ಲಿ  ದಾನಿಗಳನ್ನು ಸಹ ಅಭಿನಂದಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿಗಾರ್ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ, ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್ ಶೆಟ್ಟಿ ಮಾತನಾಡಿ, ಜಿಲ್ಲಾ ಶಿಕ್ಷಕರ ಪ್ರಶಸ್ತಿ ಪುರಸ್ಕೃತರಿಗೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದರು.

ಕಾಳಾವರ ಶ್ರೀ ಕಾಳಿಂಗ ಸುಬ್ರಮಣ್ಯ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಶಾನಾಡಿ ಚಂದ್ರಶೇಖರ್ ಹೆಗ್ಡೆ, ಬಾರ್ಕೂರು ರುಕ್ಮಿಣಿ ಶೆಟ್ಟಿ ಮೆಮೋರಿಯಲ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ. ಎನ್. ಚಂದ್ರಶೇಖರ್ ಶೆಟ್ಟಿ, ಕಾಪು ಮುದ್ದಣ್ಣ ಶೆಟ್ಟಿ, ಟ್ರಸ್ಟ್  ಕಾರ್ಯದರ್ಶಿ ಕಾಳಾವರ ಕಿಶೋರ್ ಕುಮಾರ್ ಶೆಟ್ಟಿ ಮೊಳಹಳ್ಳಿ, ಕಾಳಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೊರ್ಗಿ ರಂಜಿತ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ನೇತಾಜಿ ಯುವಕ ಮಂಡಲದ ಅಧ್ಯಕ್ಷರಾದ ಭರತ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಎಸ್ ಡಿ ಎಮ್ ಸಿ ಅಧ್ಯಕ್ಷೆ ದೀಪಾ ಶೆಟ್ಟಿ ಉಪಸ್ಥಿತರಿದ್ದರು.    

ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಕ್ವಾಡಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು, ಸಹ ಶಿಕ್ಷಕಿ ಪ್ರೇಮ.ಕೆ ಸನ್ಮಾನ ಪತ್ರ ವಾಚಿಸಿದರು.ಸಹ ಶಿಕ್ಷಕ ಉಳ್ತೂರು ಉದಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಸಹ ಶಿಕ್ಷಕಿಯರಾದ ನಾಗರತ್ನ ,ಶೈಲಜಾ,ಭಾರತಿ ಕಲ್ಕೂರ, ಸುಮಿತ್ರ, ಪೂರ್ಣಿಮಾ ಮತ್ತು ಶ್ರುತಿ ಕಾರ್ಯಕ್ರಮಕ್ಕೆ ಸಹಕರಿಸಿದರು.

 

Related Articles

Back to top button
error: Content is protected !!