ಕಾಡಿಗೆ ಸೊಪ್ಪು ತರಲು ಹೋದ ವ್ಯಕ್ತಿಯನ್ನು ಹುಲಿ ಬೇಟೆಯಾಡಿ ಅರ್ಧ ಮೃತದೇಹ ಪತ್ತೆ!!

Views: 149
ಕಾಡಿಗೆ ಸೊಪ್ಪು ತರಲು ಹೋದ ವ್ಯಕ್ತಿಯನ್ನು ಹುಲಿ ಕೊಂದು ತಿಂದಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ.
ಭೋಪಾಲ್ ನಗರ ಮಿತಿಯಿಂದ ಕೇವಲ 20 ಕಿಮೀ ದೂರದಲ್ಲಿರುವ ರೈಸನ್ ಜಿಲ್ಲೆಯ ಒಬೆದುಲ್ಲಾಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸಂತ್ರಸ್ತ ಮಣಿರಾಮ್ ಜಾತವ್, ಸೊಪ್ಪು ಸಂಗ್ರಹಿಸಲು ಏಕಾಂಗಿಯಾಗಿ ಕಾಡಿನೊಳಗೆ ಹೋಗಿದ್ದರು. ಈ ಸಂದರ್ಭದಲ್ಲಿ ಹುಲಿ ಬೇಟೆಯಾಡಿ ತಿಂದು ಹಾಕಿದೆ. ಕಾಡಿಗೆ ಹೋದ ಮಣಿರಾಮ್ ಹಲವಾರು ಗಂಟೆಗಳ ಕಾಲ ಹುಡುಕಾಡಿದರೂ ಬರದಿದ್ದಾಗ ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಡಿದರು. ಹೀಗೆ ಹುಡುಕಾಡುವಾಗ ಪೊದೆಯೊಳಗೆ ಅರ್ಧ ಮೃತದೇಹ ಸಿಕ್ಕಿದೆ.
ಡಿಎಫ್‌ಒ ವಿಜಯ್ ಕುಮಾರ್ ಮತ್ತು ಎಸ್‌ಡಿಒ ಸುಧೀರ್ ಪಟ್ಲೆ ಅವರ ಸಮ್ಮುಖದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡ ಶವ ಪರೀಕ್ಷೆ ನಡೆಸಿತು. ಜಾತವ್ ಅವರನ್ನು ಹುಲಿ ಕೊಂದು ತಿಂದಿರುವುದು ದೃಢಪಟ್ಟಿದೆ.
ಸಂಜೆಯಾದ ನಂತರ ಕಾಡಿಗೆ ಕಾಲಿಡದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಹುಲಿ ಸಂಚರಿಸಲು ಸಾಧ್ಯತೆಯಿರುವ ಇರುವ ರಸ್ತೆಗಳನ್ನು ಮುಚ್ಚಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.






